ಕೋಲ್ಕತ್ತಾ: ಭಾರತ ಏಳ್ಗೆಗೆ ಅಸಹಿಷ್ಣುತೆ ಮಾರಕ ಎಂದು ಮಾಜಿ ವಿತ್ತ ಸಚಿವ ಪಿ ಚಿದಂಬರಂ ಎಚ್ಚರಿಸಿದ್ದಾರೆ.
"ನಾವು ಹೆಚ್ಚು ಮಾನವೀಯ ಮತ್ತು ಸಹಿಷ್ಣು ಸಮಾಜವನ್ನು ಸೃಷ್ಟಿಸಬೇಕು. ಪರಸ್ಪರ ಹೆಚ್ಚು ಸಹಿಷ್ಣುಗಳಲ್ಲದ, ಹೆಚ್ಚು ಮಾನವೀಯತೆಯಿಲ್ಲದ, ವೈವಿಧ್ಯತೆಯನ್ನು ಒಪ್ಪಿಕೊಳ್ಳದ ಮತ್ತು ನಾವು ಬದುಕಿ ಅವರನ್ನು ಬದುಕಲು ಬಿಡುವ ತತ್ವವನ್ನು ಅಳವಡಿಸಿಕೊಳ್ಳದ ಸಮಾಜ ಏಳ್ಗೆ ಕಾಣುವುದು ಕಷ್ಟ" ಎಂದು ಐ ಐ ಎಂ ಕೋಲ್ಕತ್ತಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
"ಅಸಹಿಷ್ಣುತೆ ಹೆಚ್ಚೆಚ್ಚು ಸಂಘರ್ಷಕ್ಕೆ ಎಡೆಮಾಡಿಕೊಟ್ಟರೆ, ರಾಷ್ಟ್ರದ ಏಳ್ಗೆ, ಅಭಿವೃದ್ಧಿ ಮತ್ತು ಆರ್ಥಿಕವಾಗಿ ಮುನ್ನುಗುವುದಕ್ಕೆ ತಡೆ ಹಾಕುತ್ತದೆ" ಎಂದು ಕೂಡ ಚಿದಂಬರಂ ಹೇಳಿದ್ದಾರೆ.