ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

'ತ್ರಿವಳಿ ತಲಾಖ್' ಖಂಡಿಸಿ ಮಹಿಳಾ ಸಮಾನ ಹಕ್ಕುಗಳ ಪರ ಹೇಳಿಕೆ ನೀಡಿದ ಮೋದಿ

ಮುಸ್ಲಿಂ ಸಮುದಾಯದಲ್ಲಿ ಮಹಿಳಾ ಸಮಾನ ಹಕ್ಕುಗಳ ಪರವಾಗಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ತ್ರಿವಳಿ ತಲಾಖ್ (ವಿವಾಹ ವಿಚ್ಚೇಧನ) ಅನ್ನು ಖಂಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ
Guruprasad Narayana
Updated On : 24 Oct 2016, 3:22 am
ಲಖನೌ: ಮುಸ್ಲಿಂ ಸಮುದಾಯದಲ್ಲಿ ಮಹಿಳಾ ಸಮಾನ ಹಕ್ಕುಗಳ ಪರವಾಗಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ತ್ರಿವಳಿ ತಲಾಖ್ (ವಿವಾಹ ವಿಚ್ಚೇಧನ) ಅನ್ನು ಖಂಡಿಸಿದ್ದಾರೆ.
ಬುಂದೇಲ್ ಖಂಡ್ ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಈ ಕಾರಣದಿಂದಾಗಿಯೇ, ಮತಧರ್ಮದ ಹೆಸರಿನಲ್ಲಿ ಅಸಮಾನತೆಗೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಅವರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ ಎಂದು ಕೂಡ ಹೇಳಿದ್ದಾರೆ. 
ಸಂವಿಧಾನಕ್ಕೆ ತಕ್ಕಂತೆ ಸರ್ಕಾರ ಕೆಲಸ ಮಾಡಲಿದೆ ಮತ್ತು ನ್ಯಾಯಾಂಗ ಕೂಡ ಅದನ್ನೇ ಅಪೇಕ್ಷಿಸುತ್ತದೆ ಎಂದಿರುವ ಮೋದಿ ಎಲ್ಲರಿಗು ಲೈಂಗಿಕ ಸಮಾನತೆ ನೀಡಲು ತಾವು ಬದ್ಧ ಎಂದಿದ್ದಾರೆ. 

Advertisement

Advertisement

ಲೈಂಗಿಕ ಸಮಾನತೆ ತರುವ ಬದಲು ಕೆಲವು ರಾಜಕೀಯ ಪಕ್ಷಗಳು ಮತ ಬ್ಯಾಂಕ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿವೆ ಎಂದು ವಾಗ್ದಾಳಿ ನಡೆಸಿರುವ ಅವರು "ದೂರವಾಣಿಯಲ್ಲಿ ಮೂರು ಬಾರಿ ತಲಾಖ್ ಎಂದು ಹೇಳಿ ನಮ್ಮ ಸಹೋದರಿಯರಿಗೆ ವಿವಾವ ವಿಚ್ಚೇಧನ ನೀಡುವ ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದು ಹೇಗೆ" ಎಂದು ಕೂಡ ಅವರು ಹರಿಹಾಯ್ದಿದ್ದಾರೆ. 
ಇದನ್ನು ಕೋಮಿನ ಕಣ್ಣಿನಲ್ಲಿ ನೋಡಬಾರದು ಆದರೆ ಎಲ್ಲರಿಗು ಸಮಾನತೆ ತರುವ ದೃಷ್ಟಿಯಿಂದ ಚಿಂತಿಸಬೇಕು ಎಂದು ಕೂಡ ಅವರು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments