ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಐಡಿಎಸ್ ಯೋಜನೆಯಡಿ ಮಾಹಿತಿ ಗೌಪ್ಯವಾಗಿರುತ್ತದೆ: ಸರ್ಕಾರ

ಆದಾಯ ಘೋಷಣಾ ಯೋಜನೆ (ಐಡಿಎಸ್)ಯಡಿ ಬರುವ ಮಾಹಿತಿಯನ್ನು ಗೌಪ್ಯವಾಗಿಟ್ಟು, ಯಾವ ಬೇರೆ ಇಲಾಖೆಗಳಿಗೂ ಅದನ್ನು ನೀಡುವುದಿಲ್ಲ ಎಂದು ಸರ್ಕಾರ ಗುರುವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ನವದೆಹಲಿ: ಆದಾಯ ಘೋಷಣಾ ಯೋಜನೆ (ಐಡಿಎಸ್)ಯಡಿ ಬರುವ ಮಾಹಿತಿಯನ್ನು ಗೌಪ್ಯವಾಗಿಟ್ಟು, ಯಾವ ಬೇರೆ ಇಲಾಖೆಗಳಿಗೂ ಅದನ್ನು ನೀಡುವುದಿಲ್ಲ ಎಂದು ಸರ್ಕಾರ ಗುರುವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. 
"ಈ ಯೋಜನೆಯಡಿ ಘೋಷಿಸಿಕೊಳ್ಳುವ ಮಾಹಿತಿಯ ಗೌಪ್ಯತೆಯನ್ನು ಕಾಪಾಡುವ ವಿಷಯದ ಬಗ್ಗೆ ಇರುವ ಸಂದೇಹಗಳ ಬಗ್ಗೆ, ಸರಿಯಾದ ಮಾಹಿತಿಯನ್ನು ನೀಡಿದ್ದಲ್ಲಿ ಅದನ್ನು ಯಾರ ಜೊತೆಗೂ ಹಂಚಿಕೊಳ್ಳುವುದಿಲ್ಲ ಎಂದು ಮತ್ತೆ ಹೇಳುತ್ತಿದ್ದೇವೆ" ಎಂದು ಹಣಕಾಸು ಸಚಿವಾಲಯ ಹೇಳಿದೆ. 
ಸೆಪ್ಟೆಂಬರ್ 30 ರವರೆಗೆ ಚಾಲನೆಯಲ್ಲಿರುವ ಈ ಯೋಜನೆಯಲ್ಲಿ, ಇಲ್ಲಿಯವರೆಗೂ ಸಂಪೂರ್ಣವಾಗಿ ತೆರಿಗೆ ಕಟ್ಟದವರು ಮುಂದೆಬಂದು, ಇಲ್ಲಿಯವರೆಗೂ ಹೇಳಿಕೊಳ್ಳದ ಆಸ್ತಿ ಮತ್ತು ಆದಾಯವನ್ನು ಘೋಷಿಸಿ ತೆರಿಗೆ ಕಟ್ಟಬಹುದಾಗಿದೆ. 
"ಕೇಂದ್ರೀಕೃತ ಯೋಜನಾ ಕಚೇರಿ (ಸಿಪಿಸಿ-ಬೆಂಗಳೂರು)ಯಲ್ಲಿ ಆದಾಯ ತೆರಿಗೆ ಕಮಿಷನರ್ ಬಳಿ ಮಾಡಿದ ಆದಾಯ ಘೋಷಣೆಯನ್ನು, ಬೇರೆ ಯಾವುದೇ ವ್ಯಾಪ್ತಿಯ ಅಧಿಕಾರಿಗಳ ಜೊತೆ ಹಂಚಿಕೊಳ್ಳಲಾಗುವುದಿಲ್ಲ" ಎಂದು ಹೇಳಿಕೆ ತಿಳಿಸಿದೆ. 
ಹಾಗೆಯೇ ಈ ಯೋಜನೆಯಡಿ ಕಟ್ಟಿದ ತೆರಿಗೆ ಹಣವನ್ನು ವಾರ್ಷಿಕ ಹೇಳಿಕೆಯಲ್ಲಿಯೂ ನಮೂದಿಸುವದಿಲ್ಲ ಎಂದು ಸಚಿವಾಲಯ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel