ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆತ್ಮಹತ್ಯೆಗೆ ಶರಣಾದ ಎಐಐಎಂಎಸ್ ವೈದ್ಯೆ

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆ (ಏಮ್ಸ್) ನ 29 ವರ್ಷದ ವೈದ್ಯೆಯೊಬ್ಬರು ಅವರ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶುಕ್ರವಾರ ಪೊಲೀಸರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
Guruprasad Narayana
Updated On : 16 Sept 2016, 3:54 am
ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆ (ಏಮ್ಸ್) ನ 29 ವರ್ಷದ ವೈದ್ಯೆಯೊಬ್ಬರು ಅವರ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶುಕ್ರವಾರ ಪೊಲೀಸರು ಹೇಳಿದ್ದಾರೆ. 
ಏಮ್ಸ್ ನ ತುರ್ತು ನಿಘಾ ಘಟಕದ ಅನಸ್ಥೆಷಿಯಾ ವಿಭಾಗದಲ್ಲಿ ರಿತು ಮಂಕೋಟಿಯಾ ಸೇವೆ ಸಲ್ಲಿಸುತ್ತಿದ್ದರು. ಅವರು ಪೂರ್ವ ದೆಹಲಿಯ ಮಧು ವಿಹಾರ ಅಪಾರ್ಟ್ಮೆಂಟ್ ನಲ್ಲಿ ಗುರುವಾರ ಯಾವುದೋ ಔಷಧವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
"ಮೇಲ್ನೋಟಕ್ಕೆ ಇದು ಕುಟುಂಬ ಕಲಹ ಎಂದು ಕಾಣಿಸುತ್ತದೆ"ಎಂದು ಉಪ ಪೊಲೀಸ್ ಕಮಿಷನರ್ ರಿಷಿ ಪಾಲ್ ಹೇಳಿದ್ದಾರೆ. 

Advertisement

Advertisement

ಪೊಲೀಸರಿಗೆ ಶುಕ್ರವಾರ ಬೆಳೆಗ್ಗೆ ಇದರ ಮಾಹಿತಿ ದೊರೆಯಿತು ಎನ್ನುವ ಪಾಲ್ "ನಾವು ಸ್ಥಳಕ್ಕೆ ಹೋದಾಗ, ಬಾಗಿಲು ಒಡೆದು ಒಳಹೋದಮೇಲೆ ರಿತು ಮಂಕೋಟಿಯಾ ಶವ ಸಿಕ್ಕಿತು" ಎಂದಿದ್ದಾರೆ. 
ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದೆ ಎಂದು ತಿಳಿಸಿರುವ ಪಾಲ್, ಹೆಚ್ಚಿನ ವಿವರಗಳನ್ನು ತಿಳಿಸಿಲ್ಲ. ವೈದ್ಯೆ ತಮ್ಮ ಪತಿಯೊಂದಿಗೆ ಕಲಹದಲ್ಲಿದ್ದರು ಎಂದು ಸಂತ್ರಸ್ತೆಯ ಕುಟುಂಬ ಹೇಳಿರುವುದನ್ನಾಧರಿಸಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments