ಸಮಾಜವಾದಿ ಪಕ್ಷದ ಮುಖಂಡ ಶಿವಪಾಲ್ ಸಿಂಗ್ ಯಾದವ್ 
ಪ್ರಧಾನ ಸುದ್ದಿ

ಸಮಾಜವಾದಿ ಪಕ್ಷ ಬಿಕ್ಕಟ್ಟು; ಅಖಿಲೇಶ್ ಕ್ಷಮೆ ಕೋರಬೇಕೆಂದು ಆಗ್ರಹಿಸಿದ ಶಿವಪಾಲ್ ಬೆಂಬಲಿಗರು

ಉತ್ತರ ಪ್ರದೇಶದ ರಾಜಧಾನಿಯಲ್ಲಿ ರಾಜಕೀಯ ಬಿಕ್ಕಟ್ಟು ಮನೆಮಾಡಿದ್ದು, ಸಮಾಜವಾದಿ ಪಕ್ಷದ ಮುಖಂಡ ಶಿವಪಾಲ್ ಸಿಂಗ್ ಯಾದವ್ ಅವರ ಪುತ್ರ ಆದಿತ್ಯ ಯಾದವ್ ಮತ್ತು ಪತ್ನಿ ಸರಳ ಯಾದವ್ ಪಕ್ಷದ

ಲಖನೌ: ಉತ್ತರ ಪ್ರದೇಶದ ರಾಜಧಾನಿಯಲ್ಲಿ ರಾಜಕೀಯ ಬಿಕ್ಕಟ್ಟು ಮನೆಮಾಡಿದ್ದು, ಸಮಾಜವಾದಿ ಪಕ್ಷದ ಮುಖಂಡ ಶಿವಪಾಲ್ ಸಿಂಗ್ ಯಾದವ್ ಅವರ ಪುತ್ರ ಆದಿತ್ಯ ಯಾದವ್ ಮತ್ತು ಪತ್ನಿ ಸರಳ ಯಾದವ್ ಪಕ್ಷದ ಪ್ರಮುಖ ಸ್ಥಾನಗಳನ್ನು ತೊರೆದ ಹಿನ್ನಲೆಯಲ್ಲಿ ಪಕ್ಷದ ಮುಖ್ಯ ಕಚೇರಿ ಗೊಂದಲದ ಗೂಡಾಗಿದೆ. 
ಪುತ್ರ ಮತ್ತು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗು ಅವರ ಕಿರಿಯ ಸಹೋದರ ಶಿವಪಾಲ್ ಸಿಂಗ್ ಯಾದವ್ ನಡುವೆ ಮೂಡಿರುವ ಕಲಹಕ್ಕೆ ಇತಿಶ್ರೀ ಹಾಡಲು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಪಕ್ಷದ ಮುಖ್ಯ ಕಚೇರಿಯಲ್ಲಿ ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ. 
ಈ ಮಧ್ಯೆ ಮಂತ್ರಿಗಿರಿ ಕಳೆದುಕೊಂಡಿರುವ ಶಿವಪಾಲ್ ಸಿಂಗ್ ಅವರ ಗೃಹದ ಎದುರು ನೆರೆದ ಅವರ ಬೆಂಬಲಿಗರು ಮುಖ್ಯಮಂತ್ರಿ ವಿರೋಧಿ ಘೋಷಣೆಗಳನ್ನು ಕೂಗಿ, ತಮ್ಮ ನಾಯಕನಿಗೆ ಇದ್ದ ಎಲ್ಲ ಸ್ಥಾನಗಳನ್ನು ಹಿಂದಿರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಶಿವಪಾಲ್ ಅವರನ್ನು ರಾಜ್ಯದಲ್ಲಿ ಪಕ್ಷದ ಅಧ್ಯಕ್ಷನಾಗಿ ಉಳಿಸಿಕೊಂಡು, ಅವರನ್ನು ಅವಮಾನ ಮಾಡಿದ್ದಕ್ಕೆ ಕಿರಿಯರಾದ ಮುಖ್ಯಮಂತ್ರಿ ಅಖಿಲೇಶ್ ಅವರ ಕಾಲು ಮುಟ್ಟಿ ನಮಸ್ಕರಿಸಿ ಕ್ಷಮೆ ಕೋರಬೇಕು ಎಂದು ಬೆಂಬಲಿಗರು ಆಗ್ರಹಿಸಿದ್ದಾರೆ. 
ಹಲವಾರು ಮುಖಂಡರು ಸಾರ್ವಜನಿಕವಾಗಿ ಗಟ್ಟಿಯಾಗಿ ಅತ್ತು, ತಮ್ಮ ಆಗ್ರಹವನ್ನು ಪಾಲಿಸದಿದ್ದರೆ ಸುಟ್ಟುಕೊಳ್ಳುವುದಾಗಿ ಬೆದರಿಸಿದ್ದಾರೆ. 
ವಜಾಗೊಂಡ ಮಾಜಿ ಮಂತ್ರಿ ಗಾಯತ್ರಿ ಪ್ರಜಾಪತಿ ಅವರು ಸೇರಿದಂತೆ 12 ಕ್ಕೂ ಹೆಚ್ಚು ಜನ ಶುಕ್ರವಾರ ಶಿವಪಾಲ್ ಸಿಂಗ್ ಅವರನ್ನು ಭೇಟಿ ಮಾತುಕತೆ ನಡೆಸಿದ್ದಾರೆ.
ಶಿವಪಾಲ್ ಪಕ್ಷದ ಸ್ಥಾನ ಮತ್ತು ಸಚಿವ ಸಂಪುಟದಿಂದ ಹೊರಬಂದಿದ್ದು, ಅವರ ಪತ್ನಿ ಸರಳ ಎಥವ ಸಹಕಾರಿ ಬ್ಯಾಂಕ್ ನ್ ಅಧ್ಯಕ್ಷ ಸ್ಥಾನದಿಂದ ಇಳಿದಿದ್ದರೆ, ಆದಿತ್ಯ ಗುರುವಾರ ಉತ್ತರಪ್ರದೇಶ ಸಹಕಾರಿ ಫೆಡೆರೇಶನ್ ಸ್ಥಾನದಿಂದ ಕೆಳಗಿಳಿದಿದ್ದಾರೆ. 
ಇದು ಕುಟುಂಬ ಕಲಹ ಎಂದು ಗುರುತಿಸಲಾಗಿದ್ದು, ಶಿವಪಾಲ್ ಅವರಿಂದ ಕಂದಾಯ ಖಾತೆಯನ್ನು ಕಸಿದು ಅಖಿಲೇಶ್ ಅವರಿಗೆ ಅವಮಾನ ಮಾಡಿದ್ದಲ್ಲದೆ, ಕುಟುಂಬ ರಾಜಕೀಯಕ್ಕೆ ಸವಾಲಾಗಿದ್ದಾರೆ ಎನ್ನಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT