ನೇಪಾಳ ಪ್ರಧಾನಿ ಪ್ರಚಂಡ ಹಾಗೂ ಪ್ರಧಾನಿ ಮೋದಿ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಭಾರತದಿಂದ ನೇಪಾಳಕ್ಕೆ 5 ಸಾವಿರ ಕೋಟಿ ರು. ಸಾಲ

2015ರಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದಾಗಿ ನಲುಗಿ ಹೋಗಿರುವ ನೇಪಾಳಕ್ಕೆ 5 ಸಾವಿರ ಕೋಟಿ ನೆರವಿನ ಸಾಲವನ್ನು ನೀಡುವುದಾಗಿ ಭಾರತ ಸರ್ಕಾರ ಘೋಷಿಸಿದೆ.

ನವದೆಹಲಿ: 2015ರಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದಾಗಿ ನಲುಗಿ ಹೋಗಿರುವ ನೇಪಾಳಕ್ಕೆ 5 ಸಾವಿರ ಕೋಟಿ ನೆರವಿನ ಸಾಲವನ್ನು ನೀಡುವುದಾಗಿ ಭಾರತ ಸರ್ಕಾರ ಘೋಷಿಸಿದೆ.

ನೇಪಾಳ ಪ್ರಧಾನಿಯಾದ ಬಳಿಕ ನಾಲ್ಕು ದಿನಗಳ ಭೇಟಿಗಾಗಿ ಗುರುವಾರ ಭಾರತಕ್ಕೆ ಆಗಮಿಸಿರುವ ನೇಪಾಳ ನೂತನ ಪ್ರಧಾನಿ ಪುಷ್ಪ ಕಮಲ್ ದಹಾಲ್ (ಪ್ರಚಂಡ) ಶುಕ್ರವಾರ ನವದೆಹಲಿಯ  ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಪ್ರಮುಖ ಮೂರು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಈ ವೇಳೆ ಭೂಕಂಪದಿಂದಾಗಿ  ಹಾನಿಗೊಳಗಾಗಿರುವ ನೇಪಾಳದ ಪ್ರಮುಖ ನಗರಗಳ ನವೀಕರಣಕ್ಕೆ ಭಾರತ ನೆರವಿನ ಹಸ್ತ ಚಾಚಿದ್ದು, ರಿಯಾಯಿತಿ ದರದಲ್ಲಿ ನೇಪಾಳಕ್ಕೆ 5 ಸಾವಿರ ಕೋಟಿ ಸಾಲ ನೀಡುವುದಾಗಿ ಘೋಷಿಸಿದೆ.
ಭಾರತ ನೀಡಲಿರುವ ಈ ಹಣವನ್ನು ಕಠ್ಮಂಡು ಸೇರಿದಂತೆ ಹಲವು ನಗರಗಳ ನವೀಕರಣಕ್ಕೆ ಈ ಹಣ ಬಳಕೆ ಮಾಡುವುದಾಗಿ ನೇಪಾಳ ಹೇಳಿದೆ.

ನೇಪಾಳದ ತೆರೈ ಪ್ರದೇಶದಲ್ಲಿ ರಸ್ತೆ ಮಾರ್ಗ ನಿರ್ಮಾಣ ಹಾಗೂ ಮೂಲಸೌಕರ್ಯಗಳನ್ನು ಮೇಲ್ಜರ್ಜೆಗೇರಿಸುವ ಯೋಜನೆಗೆ ಸಹಕಾರ ನೀಡುವ ಕುರಿತ ಒಪ್ಪಂದಕ್ಕೆ ಪ್ರಧಾನಿ ಮೋದಿ ಮತ್ತು  ಪ್ರಚಂಡ ಅವರು ಸಹಿ ಹಾಕಿದ್ದು, ಪ್ರಚಂಡ ಹುಟ್ಟೂರು ಕಾಸ್ಕಿಯಲ್ಲಿ ಪಾಲಿಟೆಕ್ನಿಕ್ ಸಂಸ್ಥೆ ಸ್ಥಾಪಿಸುವ ಕುರಿತೂ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಉಭಯ ದೇಶಗಳ ನಡುವಿನ ಈ  ಮಹತ್ವದ ಪ್ರಸ್ತಾವನೆ ಹಳೆಯದಾಗಿದ್ದು, ಈ ಹಿಂದೆ ಯುಪಿಎ ಸರ್ಕಾರ ಇದ್ದಾಗಲೇ ಚರ್ಚೆಗೆ ಬಂದಿತ್ತು. ಆದರೆ ಕಾರಣಾಂತರಗಳಿಂದಾಗಿ ಇದು ನನೆಗುದಿಗೆ ಬಿದ್ದಿತ್ತು. ಇನ್ನು ಇದೇ ವೇಳೆ  ಯಾವುದೇ ಕಾರಣಕ್ಕೂ ಭಾರತ ವಿರುದ್ಧದ ಕಾರ್ಯಾಚರಣೆಗೆ ನೇಪಾಳ ಹಾಗೂ ನೇಪಾಳ ವಿರುದ್ಧದ ಕಾರ್ಯಾಚರಣೆಗೆ ಭಾರತದ ನೆಲವನ್ನು ಬಳಸಿಕೊಳ್ಳದಿರುವ ಮಹತ್ವದ ಒಪ್ಪಂದಕ್ಕೂ  ಉಭಯ ನಾಯಕರು ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಂದು ಒಪ್ಪಂದದ ಪ್ರಕಾರ ನೇಪಾಳದಿಂದ ಬರುವ ಹಡಗುಗಳಿಗೆ ವಿಶಾಖಪಟ್ಟಣಂ ಮೂಲಕ ಸಾರಿಗೆ ಮಾರ್ಗ ಕಲ್ಪಿಸುವ ಕುರಿತೂ ನಿರ್ಧಾರ ಕೈಗೊಳ್ಳಲಾಗಿದ್ದು, ಹೈಡ್ರೋಪವರ್ ಘಟಕ  ಸ್ಥಾಪನೆ, ಉಭಯ ದೇಶಗಳ ನಡುವಿನ ವಿದ್ಯುತ್ ಸರಬರಾಜು ಮಾರ್ಗ ವಿಸ್ತರಣೆ, ಔಷಧ ತಯಾರಿಕೆಯಲ್ಲಿ ನೇಪಾಳಕ್ಕೆ ಸಹಕಾರ ನೀಡುವ ಕುರಿತು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು  ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT