ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮುಂಬೈನಲ್ಲಿ ಭಾರಿ ಮಳೆ; ಜನಜೀವನ ತತ್ತರ; ಇನ್ನು ಹೆಚ್ಚಿನ ಮಳೆ ನಿರೀಕ್ಷೆ

ವಾಣಿಜ್ಯನಗರಿ ಮುಂಬೈನಲ್ಲಿ ಕಳೆದ 48 ಘಂಟೆಗಳಿಂದ ಸುರಿಯುತ್ತಿರುವ ಧಾರಾಕಾರದ ಮಳೆಗೆ ಜನಜೀವನ ತತ್ತರಿಸಿದೆ.

ಸಂಗ್ರಹ ಚಿತ್ರ
Guruprasad Narayana
Updated On : 22 Sept 2016, 1:35 am
ಮುಂಬೈ: ವಾಣಿಜ್ಯನಗರಿ ಮುಂಬೈನಲ್ಲಿ ಕಳೆದ 48 ಘಂಟೆಗಳಿಂದ ಸುರಿಯುತ್ತಿರುವ ಧಾರಾಕಾರದ ಮಳೆಗೆ ಜನಜೀವನ ತತ್ತರಿಸಿದೆ. 
ಕಳೆದ 24 ಘಂಟೆಗಳಲ್ಲಿ ಮುಂಬೈನಲ್ಲಿ ಸುರಿದ ಮಳೆ 84.7 ಮಿಲಿಮೀಟರ್ ಎಂದು ತಿಳಿದುಬಂದಿದೆ. ಮಳೆ ತೀವ್ರತೆ ಇನ್ನು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 
ಈ ಮಳೆಯಿಂದ ಹೆದ್ದಾರಿಗಳಲ್ಲಿ ತೀವ್ರ ವಾಹನ ದಟ್ಟಣೆ ಉಂಟುಮಾಡಿದ್ದು, ವಾಹನ ಚಾಲನೆ ಕುಂಟುತ್ತಾ ಸಾಗಿದೆ. ಹಾಗೆಯೇ ಪ್ರಾದೇಶಿಕ ರೈಲುಗಳು ಕೂಡ ನಿಧಾನವಾಗಿ ಚಲಿಸುತ್ತಿವೆ. 

Advertisement

Advertisement

ಇಲ್ಲಿಯವರೆಗೂ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಹಾಗೆಯೇ ಸಮುದ್ರ ತೀರದಲ್ಲಿ ಇಂದು ಸಂಜೆ 3:56 ರಿಂದ ರಾತ್ರಿ 10:11 ವರೆಗೆ ಭಾರಿ ಅಲೆಗಳು ಮೂಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 
ಈ ಮಳೆ ತೊಂದರೆ ಸೃಷ್ಟಿಸಿದ್ದರು, ಮುಂಬೈಗೆ ನೀರು ಸರಬರಾಜು ಮಾಡುವ ಕೆರೆಗಳೆಲ್ಲಾ ತುಂಬಿರುವುದರಿಂದ ಮುಂಬೈ ನಿವಾಸಿಗಳಿಗೆ ಸಂತಸ ಉಂಟುಮಾಡಿದೆ. ಕಳೆದ ವರ್ಷ ಬೇಸಿಗೆಯಲ್ಲಿ ಮುಂಬೈನಲ್ಲಿ ನೀರಿಗೆ ಹಾಹಾಕಾರವೆದ್ದಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement