ನವದೆಹಲಿ: ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಲು ರಾಜ್ಯ ಸಭೆಯಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಖಾಸಗಿ ಸದಸ್ಯರ ವಿಧೇಯಕವನ್ನು ಶನಿವಾರ ಸಲ್ಲಿಸಿದ್ದಾರೆ.
"'ಭಯೋತ್ಪಾದನೆಯನ್ನು ಉತ್ಪಾದಿಸುವ ರಾಷ್ಟ್ರಗಳ ಘೋಷಣೆ ಮಸೂದೆ 2016' ಖಾಸಗಿ ಸದಸ್ಯರ ವಿಧೇಯಕವನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಮಂಡಿಸಲು ಇಚ್ಛಿಸುತ್ತೇನೆ" ಎಂದು ರಾಜ್ಯ ಸಭಾ ಸಭಾಪತಿ ಹಮೀದ್ ಅನ್ಸಾರಿ ಅವರಿಗೆ ಬರೆದ ಪತ್ರದಲ್ಲಿ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಒಂದು ಸದನದಲ್ಲಿ ಖಾಸಗಿ ಸದಸ್ಯರ ವಿಧೇಯಕ ಅಂಗೀಕಾರವಾದರೆ ಇದು ಪರವಾನಗಿಗೆ ಮತ್ತೊಂದು ಸದನಕ್ಕೆ ತೆರಳುತ್ತದೆ ಮತ್ತು ನಂತರ ರಾಷ್ಟ್ರಪತಿಯವರ ಅಂಗೀಕಾರದ ಅವಶ್ಯಕತೆ ಇದೆ.