ಪ್ರಧಾನ ಸುದ್ದಿ

ಶಹಾಬುದ್ದೀನ್ ಜಾಮೀನು ವಜಾ ಪ್ರಕರಣ; ಶುಕ್ರವಾರ ಸುಪ್ರೀಂ ಕೋರ್ಟ್ ಆದೇಶ

Guruprasad Narayana
ನವದೆಹಲಿ: ರಾಜೀವ್ ರೋಶನ್ ಕೊಲೆ ಪ್ರಕರಣದ ಆರೋಪಿ ಮಾಜಿ ಆರ್ ಜೆ ಡಿ ಸದಸ್ಯ ಮೊಹಮದ್ ಶಹಾಬುದ್ದೀನ್ ಜಾಮೀನನ್ನು ವಜಾ ಮಾಡುವಂತೆ ಕೋರಿ ಬಿಹಾರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಲಿದೆ. 
ಶಹಾಬುದ್ದೀನ್ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶ ಪಿನಾಕಿ ಚಂದ್ರ ಘೋಸ್ ಮತ್ತು ನ್ಯಾಯಾಧೀಶ ಅಮಿತಾವ್ ರಾಯ್ ಅವರನ್ನು ಒಳಗೊಂಡ ನ್ಯಾಯಪೀಠ ನಾಳೆ ತೀರ್ಪು ನೀಡಲಿದೆ. 
ಬಿಹಾರ ಸರ್ಕಾರ ಈ ಪ್ರಕರಣದ ವಿಚಾರಣೆಯನ್ನು ವಿಳಂಬಿಸುತ್ತಿದೆ ಎಂದು ಶಹಾಬುದ್ದೀನ್ ಪರ ವಕೀಲ ಕೋರ್ಟ್ ಗೆ ಗುರುವಾರ ತಿಳಿಸಿದ್ದಾರೆ. 
ಶಹಾಬುದ್ದೀನ್ ಅವರನ್ನು ಸಿವಾನ್ ನಿಂದ ಭಾಗಲ್ಪುರ ಕೇಂದ್ರ ಖಾರಾಗೃಹಕ್ಕೆ ವರ್ಗಾಯಿಸಿದ್ದು ಕೂಡ ಈ ವಿಳಂಬದ ಭಾಗ ಎಂದು ಹಿರಿಯ ವಕೀಲ ಶೇಖರ್ ನಾಫದೆ ಹೇಳಿದ್ದಾರೆ. 
"ಈ ವಿಚಾರಣೆ ನಡೆಯದಂತೆ ಅವರು (ಬಿಹಾರ ಸರ್ಕಾರ) ತೆಗೆದುಕೊಂಡಿರುವ ಜಾಣ ನಿರ್ಧಾರ ಇದು. ವಿಚಾರಣೆ ಶುರುವಾದರೆ ನನ್ನ ಕಕ್ಷಿದಾರನ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲದೆ ಇರುವುದರಿಂದ ಈ ಪ್ರಕರಣ ಬಿದ್ದುಹೋಗುತ್ತದೆ" ಎಂದು ಶೇಖರ್ ಹೇಳಿದ್ದಾರೆ. 
ಇದಕ್ಕೆ ಬಿಹಾರ ಸರ್ಕಾರದ ವಕೀಲರು ಪ್ರತಿವಾದವನ್ನು ಮಂಡಿಸಿದ್ದಾರೆ. 
SCROLL FOR NEXT