ಸಿಂಗಾಪುರ: ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ದ್ವೇಷ ಹರಡಲು ಪ್ರಯತ್ನಿಸಿದ 17 ವರ್ಷದ ಹದಿಹರೆಯ ಬ್ಲಾಗರ್ ಗೆ ಸಿಂಗಾಪುರ ಕೋರ್ಟ್ ಶಿಕ್ಷಿಸಿದೆ.
ಅಮೋಸ್ ಯೀಗೆ 1460 ಡಾಲರ್ ದಂಡ ವಿಧಿಸಿರುವ ಕೋರ್ಟ್, ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಮ್ ದ್ವೇಷಿ ಸಂದೇಶಗಳನ್ನು ಫೇಸ್ಬುಕ್ ಮತ್ತು ಯೂಟ್ಯೂಬ್ ನಲ್ಲಿ ಹಾಕಿದ್ದು ಶಿಕ್ಷಾರ್ಹ ಎಂದಿದೆ.
"ಯೀ ಗಮನ ಸೆಳೆಯುವ ಸಲುವಾಗಿ ಮತ್ತು ಅದರಿಂದ ಆರ್ಥಿಕ ಲಾಭ ಪಡೆಯಲು ಸಿನಿಕರಾಗಿ ಕೋಮು ಭಾವನೆಗಳಿಗೆ ಧಕ್ಕೆ ತರುವ ಸಂದೇಶಗಳನ್ನು ಹರಡಿದ್ದಾರೆ" ಎಂದು ಪಬ್ಲಿಕ್ ಪ್ರಾಸೆಕ್ಯೂಟರ್ ಹಾನ್ ಯೀ ಹೇಳಿದ್ದು, ಅವರಿಗೆ ಕ್ರಿಶ್ಚಿಯನ್ನರನ್ನು ಅವಮಾನಿಸಿದ್ದಕ್ಕೆ ಕಳೆದ ವರ್ಷವೇ ಶಿಕ್ಷೆಯಾಗಿತ್ತು ಎಂದು ಕೂಡ ತಿಳಿಸಿದ್ದಾರೆ.
ಈಗ ಯೀ ಮೂರೂ ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದ್ದು, ಅವರ ಪರ ವಕೀಲ ಎನ್ ಕಣಗವಿಜಯನ್ ನನ್ನ ಕಕ್ಷಿದಾರ ತಪ್ಪು ಒಪ್ಪಿಕೊಂಡಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸಂದೇಶಗಳನ್ನು ಹಂಚಿಕೊಂಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ಮಾನವ ಹಕ್ಕುಗಳ ಪರಿವೀಕ್ಷಣಾ ಸಂಸ್ಥೆ (ಎಚ್ ಆರ್ ಡಬ್ಲ್ಯೂ) ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಧಕ್ಕೆ ಎಂದಿದೆ.
"ಅವರ ಪ್ರತಿಕ್ರಿಯೆಗಳು ಎಷ್ಟೇ ಉದ್ರೇಕಕಾರಿಯಾಗಿದ್ದರು ಅಮೋಸ್ ಯೀಗೆ ಶಿಕ್ಷೆ ನೀಡಿರುವುದರಿಂದ ಸಿಂಗಾಪುರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ" ಎಂದು ಎಚ್ ಆರ್ ಡಬ್ಲ್ಯೂ ಏಷಿಯಾ ವಿಭಾಗದ ಸಹ ನಿರ್ದೇಶಕ ಫಿಲ್ ರಾಬರ್ಟ್ಸನ್ ಹೇಳಿದ್ದಾರೆ.
ಈ ಶಿಕ್ಷೆಯಿಂದ ಯೀ ಸಂದೇಶಗಳನ್ನು ಓದುವವರು ಹೆಚ್ಚಾಗುತ್ತಾರೆ ಎಂದು ಕೂಡ ರಾಬರ್ಟ್ಸನ್ ಹೇಳಿದ್ದಾರೆ.
2015 ರಲ್ಲಿ ಸಿಂಗಾಪುರದ ಪಿತಾಮಹ ಎಂದೇ ಕರೆಯಲಾಗುವ ಮಾಜಿ ಪ್ರಧಾನಿ ಲಿ ಕುಆನ್ ಯೀ ಅವರ ವಿಡಿಯೋವನ್ನು ಟೀಕೆ ಮಾಡಿದ್ದಕೆ ನಾಲ್ಕು ವಾರಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಆದರೆ ಆಗ ಯೀ 16 ವರ್ಷದ ಬಾಲಕನಾಗಿದ್ದರಿಂದ ಈ ಶಿಕ್ಷೆಗೆ ಒಳಪಡಿಸದೆ, 53 ದಿಗಳ ಕಾಲ ವಶಕ್ಕೆ ಪಡೆದು, ಮಾನಸಿಕ ಚಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics