ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಅವರ 'ದ ಫ್ಲೇಮಿಂಗ್ ಟ್ರೆಸ್ಸಸ್ ಆಫ್ ದ್ರೌಪದಿ' (ದ್ರೌಪದಿಯ ಉರಿ ತಲೆಗೂದಲು) ಪುಸ್ತಕವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ಬಿಡುಗಡೆ ಮಾಡಲಿದ್ದಾರೆ.
ದ್ರೌಪದಿಯ ಹುಟ್ಟಿನಿಂದ ಆತ್ಮಾಹುತಿಯವರಿಗೆ ಮಹಾಭಾರತದ ಈ ಮುಖ್ಯಪಾತ್ರದ ಜೀವನವನ್ನು ಈ ಪುಸ್ತಕ ಚರ್ಚಿಸಲಿದೆ.
ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬಹಳಷ್ಟು ಪುಸ್ತಕಗಳನ್ನು ಬರೆದಿರುವ ಕಾಂಗ್ರೆಸ್ ಮುಖಂಡ ಅವರ 'ಶ್ರೀ ರಾಮಾಯಣ ಮಹಾನ್ವೇಷಣಂ' ಮಹಾಕಾವ್ಯಕ್ಕೆ ಮೂರ್ತಿದೇವಿ ಪ್ರಶಸ್ತಿ ಕೂಡ ಗಳಿಸಿದ್ದಾರೆ. ಶ್ರೀಯುತರು ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರು ಕೂಡ.