ಶಿವಕುಮಾರ ಸ್ವಾಮೀಜಿ 
ಪ್ರಧಾನ ಸುದ್ದಿ

ಶಿವಕುಮಾರ ಸ್ವಾಮೀಜಿಗೆ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ

ಇತ್ತೀಚಿಗಷ್ಟೇ 110ನೇ ವಸಂತಕ್ಕೆ ಕಾಲಿಟ್ಟ ನಡೆದಾಡುವ ದೇವರು, ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರನ್ನು...

ಬೆಂಗಳೂರು: ಇತ್ತೀಚಿಗಷ್ಟೇ 110ನೇ ವಸಂತಕ್ಕೆ ಕಾಲಿಟ್ಟ ನಡೆದಾಡುವ ದೇವರು, ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರನ್ನು ಕರ್ನಾಟಕ ಸರ್ಕಾರ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂಜ ಇದೇ ಮೊದಲ ಬಾರಿಗೆ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ ನೀಡಲಾಗುತ್ತಿದ್ದು, ಏಪ್ರಿಲ್ 9ರಂದು ನಡೆಯಲಿರುವ ಮಹಾವೀರ ಜಯಂತಿ ಸಂದರ್ಭದಲ್ಲಿ ಶ್ರೀಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಮಹಿಳಾ ಪರವಾದ ಹೋರಾಟಗಳಿಗೆ ಹೆಸರುವಾಸಿಯಾಗಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಮಲ್ಲಿಕಾ ಘಂಟಿ ಅವರನ್ನು 2016ನೇ ಸಾಲಿನ ಅಕ್ಕಮಹಾದೇವಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿಯನ್ನು  ಏಪ್ರಿಲ್ 11 ರಂದು ನಡೆಯಲಿರುವ ಅಕ್ಕಮಹಾದೇವಿ ಜಯಂತಿ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ  ಸಚಿವೆ ಉಮಾಶ್ರೀ ಹೇಳಿದ್ದಾರೆ.
ಈ ಎರಡೂ ಪ್ರಶಸ್ತಿಗಳನ್ನು ಮೊದಲ ಬಾರಿಗೆ ನೀಡಲಾಗುತ್ತಿದ್ದು, ಎರಡೂ ಪ್ರಶಸ್ತಿಗಳು ತಲಾ 3 ಲಕ್ಷ ರು ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಗ್ರಾಮೀಣ ಮಕ್ಕಳಿಗೆ ವಿಶೇಷ ಆದ್ಯತೆ ನೀಡಿ ಅವರ ಬದುಕನ್ನು ರೂಪಿಸುವಲ್ಲಿ ಶ್ರೀಗಳು ಮಾಡಿದ ಕೆಲಸ ಅಸಮಾನ್ಯವಾದದ್ದು. ಅವರ ಸೇವೆಯನ್ನು ಪರಿಗಣಿಸಿ ಮಹಾವೀರ ಶಾಂತಿ ಪ್ರಶಸ್ತಿಗೆ ಡಾ. ಶಿವಕುಮಾರ ಸ್ವಾಮೀಜಿಯವರನ್ನು ಆಯ್ಕೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!

ಮಧ್ಯಪ್ರದೇಶ: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಮರಿ ಸಾವು!

'ದೇಶಕ್ಕೆ ಬೇಕಿರುವುದು ಸಾಕ್ಷ್ಯವೇ ಹೊರತು ಆರೋಪಗಳಲ್ಲ; ರಾಹುಲ್ ಗಾಂಧಿಯದ್ದು 'ಪೊಳ್ಳು' ಪ್ರತಿಭಟನೆ, ಆರೋಪ: ಬಿಜೆಪಿ ವಾಗ್ದಾಳಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!