ಪ್ರಧಾನ ಸುದ್ದಿ

ಉಪ ಚುನಾವಣೆ: ನಂಜನಗೂಡು, ಗುಂಡ್ಲುಪೇಟೆ ಕಾಂಗ್ರೆಸ್ ತೆಕ್ಕೆಗೆ; ಬಿಜೆಪಿಗೆ ತೀವ್ರ ಮುಖಭಂಗ

Srinivasamurthy VN

ಮೈಸೂರು: ತೀವ್ರ ಕುತೂಹಲ ಕೆರಳಿಸಿದ್ದ ನಂಜನಗೂಡು-ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಾದ ಗೀತಾ ಮಹದೇವ ಪ್ರಸಾದ್ ಹಾಗೂ ಕಳಲೆ  ಕೇಶವ ಮೂರ್ತಿ ಅವರು ಗೆಲುವು ಸಾಧಿಸಿದ್ದಾರೆ.

ರಾಜ್ಯ ಸರ್ಕಾರ ಮತ್ತು ಶ್ರೀನಿವಾಸ್ ಪ್ರಸಾದ್ ಅವಲ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಅವರಿಗೆ ತೀವ್ರ ಮುಖಭಂಗವಾಗಿದ್ದು, ಬರೊಬ್ಬರಿ 21, 334  ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಈ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್ ಒಟ್ಟು 64, 878 ಮತಗಳನ್ನು ಪೆಡೆದಿದ್ದು, ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವ ಮೂರ್ತಿ ಒಟ್ಟು 86, 212 ಮತಗಳನ್ನು  ಪಡೆದಿದ್ದಾರೆ.

ಇನ್ನು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಮತ್ತು ದಿವಂಗತ ಎಚ್ ಎಸ್ ಮಹದೇವ ಪ್ರಸಾದ್ ಅವರ ಪತ್ನಿ ಗೀತಾ ಮಹದೇವ ಪ್ರಸಾದ್ ಅವರು ಜಯಭೇರಿ ಭಾರಿಸಿದ್ದು, ಗೀತಾ ಅವರು ಒಟ್ಟು 10, 877 ಮತಗಳ  ಅಂತರಿಂದ ಬಿಜೆಪಿಯ ನಿರಂಜನ ಕುಮಾರ್ ಅವರನ್ನು ಸೋಲಿಸಿದ್ದಾರೆ. ಗೀತಾ ಅವರು ಒಟ್ಟು 90,258 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ನಿರಂಜನ್ ಕುಮಾರ್ 79, 381 ಮತಗಳನ್ನು ಪಡೆದು ಸೋಲುಕಂಡಿದ್ದಾರೆ.

SCROLL FOR NEXT