ನವದೆಹಲಿ: ಮುಂಬೈನ ಪೂಜಾಮಂದಿರದ ಸುತ್ತಲಿನ ಒತ್ತುವರಿಯನ್ನು ಮೇ ೮ ರೊಳಗೆ ತೆರವುಗೊಳಿಸಲು ಹಜಿ ಅಲಿ ದರ್ಗಾ ಟ್ರಸ್ಟ್ ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಸ್ವಂತವಾಗಿ ನಾವೇ ಒತ್ತುವರಿಯನ್ನು ತೆರವುಗೊಳಿಸುತ್ತೇವೆ ಎಂದು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಮುಖ್ಯ ನ್ಯಾಯಾಧೀಶ ಜಗದೀಶ್ ಸಿಂಗ್ ಖೇಲ್ಕರ್, ನ್ಯಾಯಾಧೀಶ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಒಳಗೊಂಡ ನ್ಯಾಯಪೀಠ, ತೆರವುಗೊಳಿಸಲು ರಚಿಸಿದ್ದ ವಿಶೇಷ ಜಂಟಿ ಪಡೆಗೆ ಸದ್ಯಕ್ಕೆ ಕಾಯಲು ತಿಳಿಸಿದೆ.
ಅಧಿಕಾರಿಗಳಿಗೆ ಒಪ್ಪಿಗೆಯಾಗುವಂತೆ ತೆರವು ಕಾರ್ಯಾಚರಣೆ ಇರಬೇಕು ಎಂದು ಕೂಡ ನ್ಯಾಯಾಲಯ ಹೇಳಿದೆ. ೯೦೭ ಸ್ಕ್ವೇರ್ ಮೀಟರ್ ಜಾಗದಲ್ಲಿ ನಿರ್ಮಿಸಲಾಗಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಅಧಿಕಾರಿಗಳು ಆದೇಶ ನೀಡಿದ್ದರು.
ಮುಂದಿನ ವಿಚಾರಣೆ ಮೇ ೯ ರಂದು ನಡೆಯಲಿದೆ.