ಬಿಜೆಪಿ ಸಂಸದ ಸುಭ್ರಮಣ್ಯನ್ ಸ್ವಾಮಿ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಕಾಶ್ಮೀರದ ಜನಸಂಖ್ಯೆಯನ್ನು ತಗ್ಗಿಸಿ, ಕಾಶ್ಮೀರಿಗಳನ್ನು ತಮಿಳುನಾಡಿನ ನಿರಾಶ್ರಿತರ ಶಿಬಿರಗಳಿಗೆ ಕಳುಹಿಸಬೇಕು ಎಂದು ಬಿಜೆಪಿ ಸಂಸದ ಸುಭ್ರಮಣ್ಯನ್ ಸ್ವಾಮಿ ಮಂಗಳವಾರ ವಿವಾದಾತ್ಮಕ ಸಲಹೆ ನೀಡಿದ್ದಾರೆ.
"ಹಾಶ್ಮಿರ ಕಣಿವೆ ಪ್ರತಿಭಟನೆಗಳಿಗೆ ಪರಿಹಾರವೆಂದರೆ, ಅಲ್ಲಿ ಕಾಶ್ಮೀರಿ ಹಿಂದುಗಳಿಗೆ ಮಾಡಿದಂತೆ ಅಲ್ಲಿನ ಜನಸಂಖ್ಯೆಯನ್ನು ತಗ್ಗಿಸುವುದು. ಕೆಲವು ವರ್ಷಗಳವೆರೆಗೆ ಅವರನ್ನು ತಮಿಳುನಾಡಿನಿಂದ ನಿರಾಶ್ರಿತ ಶಿಬಿರಗಳಿಗೆ ಕಳುಹಿಸಿ" ಎಂದು ಕಣಿವೆಯಲ್ಲಿ ಭದ್ರತಾ ಪಡೆಗಳೊಂದಿಗೆ ವಿಶ್ವವಿದ್ಯಾಲಯ ಮತ್ತು ಕಾಲೇಜು ವಿದ್ಯಾರ್ಥಿಗಳು ಘರ್ಷಣೆ ನಡೆಸಿದ ಒಂದು ನಂತರ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಸರ್ಕಾರ ತಾತ್ಕಾಲಿಕವಾಗಿ ಎಲ್ಲ ಶಾಲೆಗಳು ಮತ್ತು ಕಾಲೇಜುಗಲನ್ನು ಮುಚ್ಚುವದಕ್ಕೆ ಆದೇಶ ನೀಡಿದ್ದು, ಕಣಿವೆ ಈಗ ಕುದಿಯುತ್ತಿದೆ.
ಇತ್ತೀಚಿಗೆ ಉಪಚುನಾವಣೆ ಸಂಬಂಧಿ ಹಿಂಸೆಯಲ್ಲಿ ಭದ್ರತಾ ಪಡೆಗಳ ಗುಂಡಿಗೆ ೮ ಜನರು ಬಲಿಯಾದ ನಂತರ ಕಣಿವೆಯಲ್ಲಿ ಹೊಸ ಪ್ರತಿಭಟನೆಗಳು ಪ್ರಾರಂಭವಾಗಿದ್ದವು. ಬುಡಗಾಂ ಜಿಲ್ಲೆಯ ಮತಗಟ್ಟೆಗೆ ಜನರ ಗುಂಪು ನುಗ್ಗಿದ್ದಾಗ ಭದ್ರತಾ ಪಡೆಗಳೊಂದಿಗೆ ಸಂಘರ್ಷ ನಡೆದು ೮ ಜನರು ಮೃತಪಟ್ಟಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics