ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ತಮಿಳುನಾಡಿನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ; ಎಐಎಡಿಎಂಕೆ ತುರ್ತು ಸಭೆ, ಶಶಿಕಲಾ ಬಣದ ಉಚ್ಛಾಟನೆ?

ತಮಿಳುನಾಡಿನಲ್ಲಿ ಮತ್ತೆ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಎಐಎಡಿಎಂಕೆ ಪಕ್ಷ ತನ್ನೆಲ್ಲಾ ಶಾಸಕರ ತುರ್ತು ಸಭೆ ನಡೆಸುತ್ತಿದ್ದು, ಬಂಡಾಯವೆದ್ದಿರುವ ಪನ್ನೀರ್ ಸೆಲ್ವಂ ಬಣದೊಂದಿಗೆ ಸಂಧಾನ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಚೆನ್ನೈ: ತಮಿಳುನಾಡಿನಲ್ಲಿ ಮತ್ತೆ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಎಐಎಡಿಎಂಕೆ ಪಕ್ಷ ತನ್ನೆಲ್ಲಾ ಶಾಸಕರ ತುರ್ತು ಸಭೆ ನಡೆಸುತ್ತಿದ್ದು, ಬಂಡಾಯವೆದ್ದಿರುವ ಪನ್ನೀರ್ ಸೆಲ್ವಂ ಬಣದೊಂದಿಗೆ ಸಂಧಾನ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಚೆನ್ನೈನ ಬಂದರಿನಲ್ಲಿ ಲಂಗರು ಹಾಕಿರುವ ಭಾರತೀಯ ನೌಕಾಪಡೆಗೆ ಸೇರಿದೆ ಐಎನ್ ಎಸ್ ಯುದ್ಧ ನೌಕೆಯಲ್ಲಿ ಸಿಎಂ ಪಳನಿ ಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಜಯಲಲಿತಾ ಅವರ ಸಾವಿನ ನಂತರ  ಇಬ್ಭಾಗವಾಗಿರುವ ಎಐಎಡಿಎಂಕೆ ಪಕ್ಷವನ್ನು ಮತ್ತೆ ಒಟ್ಟುಗೂಡಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸಲಾಗುತ್ತಿದೆ. ಹೀಗಾಗಿ ಮಾಜಿ ಸಿಎಂ ಪನ್ನೀರ್ ಸೆಲ್ವಂ ಬಣಕ್ಕೂ ಸಭೆಗೆ ಹಾಜರಾಗುವಂತೆ ಆಹ್ವಾನ ನೀಡಲಾಗಿದ್ದು, ಪಕ್ಷದ ಚಿನ್ಹೆ  ಎರಡು ಎಲೆಗಳ ಗುರುತನ್ನು ಮರಳಿ ಪಕ್ಷಕ್ಕೆ ಪಡೆಯಲು ಅಗತ್ಯವಾದ ಕ್ರಮಗಳ ಕುರಿತು ಚರ್ಚಿಸಲಾಗುತ್ತಿದೆ.

ಅಗತ್ಯ ಬಿದ್ದರೆ ಪಕ್ಷದಿಂದ ಶಶಿಕಲಾ ಬಣದ ಉಚ್ಛಾಟನೆ!

ಇನ್ನು ರಾಜ್ಯದಲ್ಲಿ ದಿನೇ ದಿನೇ ಹದಗೆಡುತ್ತಿರುವ ಎಐಎಡಿಎಂಕೆ ಪಕ್ಷದ ವರ್ಚಸ್ಸನ್ನು ಉಳಿಸಿಕೊಳ್ಳಲು ಹಾಗೂ ಪಕ್ಷದ ಮೇಲಿನ ಜನರ ಅಸಮಾಧಾನವನ್ನು ಹೊಗಲಾಡಿಸುವ ಸಲುವಾಗಿ ಪನ್ನೀರ್ ಸೆಲ್ವಂ ಬಣದೊಂದಿಗೆ ಸಿಎಂ ಪಳನಿ  ಸ್ವಾಮಿ ಸಂಧಾನ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಪಕ್ಷಕ್ಕೆ ಅಗತ್ಯವೆನಿಸಿದರೆ ಶಶಿಕಲಾ ಹಾಗೂ ಅವರ ಬಣವನ್ನು ಪಕ್ಷದಿಂದಲೇ ಉಚ್ಛಾಟಿಸುವ ಕುರಿತೂ ಚರ್ಚೆ ನಡೆಸಲಾಗುತ್ತಿದೆ ಎಂದು  ತಿಳಿದುಬಂದಿದೆ.

ಆಕ್ರಮ ಆಸ್ತಿಗಳಿಕೆ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಶಶಿಕಲಾ ಹಾಗೂ ಚುನಾವಣಾ ಆಯೋಗಕ್ಕೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ರಿಂದಾಗಿ ಪಕ್ಷಕ್ಕೆ ತೀವ್ರ  ಮುಜುಗರವಾಗಿದ್ದು, ತಮಿಳುನಾಡು ಜನತೆ ಕೂಡ ಎಐಎಡಿಎಂಕೆ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜಯಲಲಿತಾ ಅವರ ಸಾವಿನ ಬಳಿಕ ಶಶಿಕಲಾ ಅವರ ಪರ ವಿರೋಧ ವಾದಗಳು  ಕೇಳಿಬಂದಿತ್ತಾದರೂ, ಬಳಿಕ ಅವರ ವಿರುದ್ಧದ ಆಭಿಪ್ರಾಯಗಳು ಹೆಚ್ಚಾಗ ತೊಡಗಿವೆ. ಇದೇ ಕಾರಣಕ್ಕೆ ಶಶಿಕಲಾ ಮತ್ತು ಟಿಟಿವಿ ದಿನಕರನ ಮತ್ತು ಅವರ ಬಣವನ್ನು ಪಕ್ಷದಿಂದಲೇ ಉಚ್ಛಾಟಿಸಲು ಪಕ್ಷದ ಹಿರಿಯ ಮುಖಂಡರು ಸಲಹೆ  ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದೇ ಕಾರಣಕ್ಕೆ ಸಿಎಂ ಪಳನಿ ಸ್ವಾಮಿ ಪನ್ನೀರ್ ಸೆಲ್ವಂ ಬಣದೊಂದಿಗೆ ಸಂಧಾನ ಮಾತುಕತೆ ನಡೆಸುತ್ತಿದ್ದು, ಮತ್ತೆ ಪಕ್ಷವನ್ನು ಒಟ್ಟು ಗೂಡಿಸಲು ಹರಸಾಹಸ ಪಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT