ವಿಜಯ್ ಮಲ್ಯ 
ಪ್ರಧಾನ ಸುದ್ದಿ

ಮಲ್ಯ ಬ್ರಿಟಿಶ್ ನ್ಯಾಯಾಂಗ ವಿಚಾರಣೆಯಲ್ಲಿದ್ದಾರೆ; ಭಾರತಕ್ಕೆ ಕರೆತರಲು ಪ್ರಯತ್ನ: ಜೇಟ್ಲಿ

ವಿಜಯ್ ಮಲ್ಯ ಪ್ರಕರಣ ಸದ್ಯಕ್ಕೆ ಬ್ರಿಟಿಶ್ ನ್ಯಾಯಾಂಗ ವಿಚಾರಣೆಯನ್ನು ಎದುರಿಸುತ್ತಿದ್ದು, ಅವರನ್ನು ಭಾರತದಲ್ಲಿ ವಿಚಾರಣೆ ನಡೆಸಲು ಕರೆತರುವುದಕ್ಕೆ ಭಾರತೀಯ ಏಜೆನ್ಸಿಗಳು ಅತ್ಯುತ್ತಮ ಶ್ರಮ ವಹಿಸಿವೆ

ನವದೆಹಲಿ: ವಿಜಯ್ ಮಲ್ಯ ಪ್ರಕರಣ ಸದ್ಯಕ್ಕೆ ಬ್ರಿಟಿಶ್ ನ್ಯಾಯಾಂಗ ವಿಚಾರಣೆಯನ್ನು ಎದುರಿಸುತ್ತಿದ್ದು, ಅವರನ್ನು ಭಾರತದಲ್ಲಿ ವಿಚಾರಣೆ ನಡೆಸಲು ಕರೆತರುವುದಕ್ಕೆ ಭಾರತೀಯ ಏಜೆನ್ಸಿಗಳು ಅತ್ಯುತ್ತಮ ಶ್ರಮ ವಹಿಸಿವೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ. 
"ಈ ಪ್ರಕರಣ (ಮಲ್ಯ) ಸದ್ಯಕ್ಕೆ ಆ ದೇಶದ (ಇಂಗ್ಲೆಂಡ್) ನ್ಯಾಯಾಂಗ ವಿಚಾರಣೆ ಭಾಗವಾಗಿದೆ" ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ. 
"ಸರ್ಕಾರ ಮತ್ತು ಅದರ ಏಜೆನ್ಸಿಗಳು ತಮ್ಮ ಶ್ರಮ ವಹಿಸಿವೆ.. ತನಿಖಾ ದಳಗಳು ಅವರು ಮಾಡಿರುವ ಅಪರಾಧಗಳ ಬಗ್ಗೆ ಖಚಿತವಾಗಿವೆ, ಆದುದರಿಂದ ಅವರನ್ನು ಭಾರತಕ್ಕೆ ಕರೆತರಬೇಕಿದೆ" ಎಂದು ಕೂಡ ಜೇಟ್ಲಿ ಹೇಳಿದ್ದಾರೆ. 
ಭಾರತದಲ್ಲಿ ಘೋಷಿತ ಅಪರಾಧಿಯಾಗಿರುವ ಸಾಲದ ದೊರೆ ವಿಜಯ್ ಮಲ್ಯ ಅವರನ್ನು ನೆನ್ನೆ ಮಧ್ಯಾಹ್ನ ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿ, ಬಳಿಕ ವೆಸ್ಟ್ ಮಿನಿಸ್ಟರ್ಸ್ ಕೋರ್ಟ್ ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ವೆಸ್ಟ್ ಮಿನಿಸ್ಟರ್ಸ್ ಮ್ಯಾಜಿಸ್ಟ್ರೇಟ್ ಕೋರ್ಟ್, ಕೇವಲ ಮೂರು ಗಂಟೆಗಳಲ್ಲೇ ವಿಜಯ್ ಮಲ್ಯ ಅವರನ್ನು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು. 
ಭಾರತೀಯ ಬ್ಯಾಂಕ್ ಗಗೆ ವಿಜಯ್ ಮಾಲಿ ೮೦೦೦ ಕೋಟಿಗೂ ಹೆಚ್ಚು ಸಾಲ ತೀರಿಸಬೇಕಿದೆ. ನೆನ್ನೆ ಮಲ್ಯ ಅವರಿಗೆ ಜಾಮೀನು ನೀಡಿದ್ದ ಕೋರ್ಟ್ ಹಲವು ಕಠಿಣ ಷರತ್ತುಗಳನ್ನು ಕೂಡ ವಿಧಿಸಿದೆ. "ಯಾವುದೇ ಪ್ರವಾಸ ದಾಖಲೆಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ ಮತ್ತು ಇಂಗ್ಲೆಂಡ್ ಬಿಡುವಂತಿಲ್ಲ" ಎಂಬ ಷರತ್ತು ವಿಧಿಸಿದೆ. 
ಕಳೆದ ಫೆಬ್ರವರಿಯಲ್ಲಿ ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಭಾರತ ಮಾಡಿದ್ದ ಮನವಿಯನ್ನು ಬ್ರಿಟಿಷ್ ಸರ್ಕಾರ ಪುರಷ್ಕರಿಸಿದ್ದು, ಅದನ್ನು ವೆಸ್ಟ್ ಮಿನಿಸ್ಟರ್ಸ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ರವಾನಿಸಿತ್ತು.
ಭಾರತ–ಬ್ರಿಟನ್‌ ನಡುವಣ ಪರಸ್ಪರ ಕಾನೂನು ನೆರವು ಒಪ್ಪಂದ(ಎಂಎಲ್‌ಎಟಿ)ದ ಅಡಿಯಲ್ಲಿ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಬ್ರಿಟನ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತವಾಗಿ ಮನವಿ ಮಾಡಿತ್ತು. ಅದನ್ನು ಬ್ರಿಟನ್ ಸರ್ಕಾರ ಪುರಷ್ಕರಿಸಿತ್ತು. ಅಲ್ಲದೆ ಮಲ್ಯ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸುವ ಬಗ್ಗೆ ಲಂಡನ್ ಕೋರ್ಟ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!