ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಿಜೆಪಿಯನ್ನು ಹದ್ದುಬಸ್ತಿನಲ್ಲಿಡಲು ಪ್ರಾದೇಶಿಕ ಪಕ್ಷಗಳೇ ಸಾಕು: ಮಮತಾ

ಭಾರತೀಯ ಜನತಾ ಪಕ್ಷಕ್ಕೆ ತಡೆಯೊಡ್ಡಲು ಪ್ರಾದೇಶಿಕ ಪಕ್ಷಗಳೇ ಸಾಕು ಎಂದು ಗುರುವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Guruprasad Narayana
Updated On : 20 Apr 2017, 8:50 am
ಭುವನೇಶ್ವರ್: ಭಾರತೀಯ ಜನತಾ ಪಕ್ಷಕ್ಕೆ ತಡೆಯೊಡ್ಡಲು ಪ್ರಾದೇಶಿಕ ಪಕ್ಷಗಳೇ ಸಾಕು ಎಂದು ಗುರುವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 
ಆದರೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯನ್ನು ಎದುರಿಸಲು ಒಕ್ಕೂಟವನ್ನು ಸ್ಥಾಪಿಸುವುದಕ್ಕೆ ಇದಿನ್ನೂ ಆರಂಭದ ಸಮಯ ಎಂದು ಕೂಡ ಬ್ಯಾನರ್ಜಿ ಹೇಳಿದ್ದಾರೆ. 
"ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವುದು ನಮ್ಮದು ನಿರಂತರ ಪ್ರಯತ್ನ. ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗೂಡಬೇಕು ಎಂಬುದು ನಮ್ಮ ಬಯಕೆ" ಎಂದು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಹೇಳಿದ್ದಾರೆ. 

Advertisement

Advertisement

ಧರ್ಮ, ಜಾತಿ ಮತ್ತು ಪಂಥಗಳ ಆಧಾರದ ಮೇಲೆ ಬಿಜೆಪಿ ದೇಶವನ್ನು ಒಡೆಯುತ್ತಿದೆ ಎಂದು ಕೂಡ ಅವರು ವಾಗ್ದಾಳಿ ನಡೆಸಿದ್ದಾರೆ. 
"ಅವರು ಹಿಂದೂ ಮತ್ತು ಮುಸ್ಲಿಮರನ್ನು ಒಡೆಯುತ್ತಾರೆ. ಅವರು ಹಿಂದೂಗಳು ಮತ್ತು ಸಿಖ್ಖರನ್ನು ಒಡೆಯುತ್ತಾರೆ ಮತ್ತು ಹಿಂದುಗಳನ್ನೇ ಒಡೆಯುತ್ತಾರೆ. ನಾವು ಇದನ್ನು ತಡೆಗಟ್ಟಬೇಕು" ಎಂದು ಕೂಡ ಅವರು ಹೇಳಿದ್ದಾರೆ. 
ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರ ಜೊತೆಗಿನ ಭೇಟಿಯಲ್ಲಿ ರಾಜಕೀಯ ಚರ್ಚಿಸಿಲ್ಲ ಎಂದು ಕೂಡ ಬ್ಯಾನರ್ಜಿ ಹೇಳಿದ್ದಾರೆ. 
"ನಾನಿಂದು (ಮಾಜಿ ಮುಖಮಂತ್ರಿ) ಬಿಜು ಪಾಟ್ನಾಯಕ್ ಅವರಿಗೆ ಗೌರವ ಸಲ್ಲಸಿದೆ. ಅವರನ್ನು ನಾನು ಚೆನ್ನಾಗಿ ಬಲ್ಲವಳಾಗಿದ್ದೆ. ಅವರಿಗೆ ನನ್ನ ಬಗ್ಗೆ ಬಹಳ ಒಲವಿತ್ತು. ನಾವು ರಾಜಕೀಯ ಚರ್ಚೆ ಮಾಡಲಿಲ್ಲ. ರಾಜಕೀಯ ೩೬೫ ದಿನಗಳು ಇರುತ್ತದೆ. ನವೀನ್ ಪಾಟ್ನಾಯಕ್ ಅವರಿಗೆ ಒಳ್ಳೆಯ ಆರೋಗ್ಯ ಸಿಗಲಿ ಮತ್ತು ಅವರ ಪಕ್ಷ ಚೆನ್ನಾಗಿ ಬೆಳೆಯಲಿ" ಎಂದು ಕೂಡ ಅವರು ಹೇಳಿದ್ದಾರೆ. 
ಒರಿಸ್ಸಾಗೆ ಮೂರು ದಿನಗಳ ಪ್ರವಾಸದಲ್ಲಿರುವ ಬ್ಯಾನರ್ಜಿ ಬುಧವಾರ ಪೂರಿಯ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement