ನವದೆಹಲಿ: ನಕಲಿ ಪಾಸ್ ಪೋರ್ಟ್ ಹೊಂದಿದ ಪ್ರಕರಣದಲ್ಲಿ ಭೂಗತದೊರೆ ರಾಜೇಂದ್ರ ಸದಾಶಿವ್ ನಿಖಲಜೆ ಅಲಿಯಾಸ್ ಛೋಟಾ ರಾಜನ್ ಗೆ ಸಿಬಿಐ ನ್ಯಾಯಾಲಯ ಮಂಗಳವಾರ ಏಳು ವರ್ಷಗಳ ಜೈಲು ಸಜೆ ವಿಧಿಸಿದೆ.
ರಾಜನ್ ಒಟ್ಟಾರೆ ೮೫ ಪ್ರಕರಣಗಳನ್ನು ಎದುರಿಸುತ್ತಿದ್ದು, ಈಗ ಮೊದಲನೇ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿರುವ ಕೋರ್ಟ್ ಸಜೆ ವಿಧಿಸಿದೆ.
ಸೆಂಟ್ರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವೀರೇಂದ್ರ ಕುಮಾರ್ ಗೋಯಲ್ ಅವರು, ರಾಜನ್ ಜೊತೆಗೆ ಮಾಜಿ ಪಾಸ್ ಪೋರ್ಟ್ ಅಧಿಕಾರಿಗಳಾದ ಜಯಶ್ರೀ ದತ್ತಾತ್ರೇಯ ರಹಾತೆ, ದೀಪಕ್ ನಟವರಲಾಲ್ ಷಾ ಮತ್ತು ಲಲಿತ ಲಕ್ಹ್ಮಣನ್ ಅವರುಗಳನ್ನು ತಪ್ಪಿತಸ್ಥರು ಎಂದು ಘೋಷಿಸಿದ್ದಾರೆ.