ಪ್ರಧಾನ ಸುದ್ದಿ

ಕಾಶ್ಮೀರ ಫುಟ್ಬಾಲ್ ಆಟಗಾರ, ಎಲ್ಇಟಿ ಮಾಜಿ ಸದಸ್ಯ ಮಜೀದ್ ಖಾನ್ ಶಿಕ್ಷಣಕ್ಕಾಗಿ ಹೊರರಾಜ್ಯಕ್ಕೆ!

Raghavendra Adiga
ಶ್ರೀನಗರ: ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿ ಬಳಿಕ ಅಲ್ಲಿಂದ ಮರಳಿ ಬಂದಿದ್ದ ಕಾಶ್ಮೀರಿ ಫುಟ್ಬಾಲ್ ಆಟಗಾರ ಮಜೀದ್ ಖಾನ್ ಪೋಲೀಸ್ ಕಸ್ಟಡಿಯಿಂದ ಬಿಡುಗಡೆಯಾಗಿದ್ದು ಇದೀಗ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೊರರಾಜ್ಯಕ್ಕೆ ಕಳಿಸಲಾಗಿದೆ.
"ಒಂದು ವಾರದ ಹಿಂದೆ ಮಜೀದ್ ನನ್ನು ಪೊಲೀಸರು ಬಿಡುಗಡೆ ಮಾಡಿದರು. ತನ್ನ ಬಿಡುಗಡೆಯ ನಂತರ, ಆತ ತಾನು ಅಧ್ಯಯನಗಳು ಮುಂದುವರಿಸಲು ಬಯಸಿದ ಹಾಗಾಗಿ ನಾವು ಅವನ ಅಧ್ಯಯನವನ್ನು ಮುಂದುವರಿಸಲು ಹೇಳಿ ಹೊರರಾಜ್ಯಕ್ಕೆ ಕಳುಹಿಸಿದ್ದೇವೆ" ಮಜೀದ್ ತಂದೆ ಇರರ್ಷಾದ್ ಅಹಮದ್ ಖಾನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಬಿ.ಕಾಂ 2 ನೇ ವರ್ಷದ ವಿದ್ಯಾರ್ಥಿಯಾಗಿದ್ದ ಮಜೀದ್, ದಕ್ಷಿಣ ಕಾಶ್ಮೀರ ಅನಂತನಾಗ್ ಜಿಲ್ಲೆಯವರಾಗಿದ್ದು, ನವೆಂಬರ್ 17 ರಂದು ಉಗ್ರಗಾಮಿ ಸಂಘಟನೆ ಲಷ್ಕರ್ ಇ ತೊಯ್ಬಾ ತೊರೆದ ನಂತರ ಭದ್ರತಾ ಪಡೆಗಳ ಮುಂದೆ ಶರಣಾಗಿದ್ದರು.
"ಆತನ ಎಲ್ಲಾ ವೆಚ್ಚವನ್ನು ನಾವು, ಕುಟುಂಬದವರೇ ಭರಿಸುತ್ತೇವೆ. ಅದಕ್ಕಾಗಿ ಯಾವ ಏಜನ್ಸಿಯ ಸಹಕಾರ ಪಡೆಯುವುದಿಲ್ಲ" ಎಂದಿರುವ ಖಾನ್ "ತನ್ನ ಮಗ ಉನ್ನತ ಶಿಕ್ಷಣ ಪಡೆಯಬೇಕೆನ್ನುವುದುಉ ನಮ್ಮ ಬಯಕೆ. ಅದಕ್ಕಾಗಿ ನಾವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ. ಅವನನ್ನು ಒಳ್ಳೆಯ ಕಾಲೇಜಿಗೆ ಸೇರಿಸಲಾಗಿದೆ".ಎಂದಿದ್ದಾರೆ.
SCROLL FOR NEXT