ಪ್ರಧಾನ ಸುದ್ದಿ

ಶಹಾಬುದ್ದೀನ್ ನನ್ನು ತಿಹಾರ್ ಜೈಲಿಗೆ ಸ್ಥಳಾಂತರಿಸಲು ಆದೇಶಿಸಿದ ಸುಪ್ರೀಂ ಕೋರ್ಟ್

Guruprasad Narayana
ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್ ಜೆ ಡಿ) ಮುಖಂಡ ಮತ್ತು ಪತ್ರಕರ್ತನೊಬ್ಬರ ಕೊಲೆ ಆರೋಪ ಎದುರಿಸುತ್ತಿರುವ ಮೊಹಮದ್ ಶಹಾಬುದ್ದೀನ್ ನನ್ನು ಬಿಹಾರದ ಸಿವಾನ್ ಜೈಲಿನಿಂದ, ತಿಹಾರ್ ಕೇಂದ್ರ ಖಾರಾಗೃಹಕ್ಕೆ ಸ್ಥಳಾಂತರಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ವಿಚಾರಣೆ ಸುಗಮವಾಗಿ ಮತ್ತು ಮುಕ್ತವಾಗಿ ನಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ. 
ಈ ಆದೇಶವನ್ನು ಬಿಹಾರ ಗೃಹ ಕಾರ್ಯಾಲಯಕ್ಕೆ ತಲುಪಿಸುವಂತೆ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಅಮಿತಾವ ರಾಯ್ ಒಳಗೊಂಡ ನ್ಯಾಯಪೀಠ ತಿಳಿಸಿದೆ. 
ಈ ಸ್ಥಳಾಂತರಗೊಳ್ಳುವ ವೇಳೆಯಲ್ಲಿ ಶಹಾಬುದ್ದೀನ್ ಗೆ ಯಾವುದೇ ವಿಶೇಷ ಸವಲತ್ತುಗಳನ್ನು ನೀಡಬಾರದು ಎಂದು ಕೂಡ ಕೋರ್ಟ್ ಹೇಳಿದೆ. 
ಕೊಲೆಯಾದ ಪತ್ರಕರ್ತ ರಾಜದೇವ್ ರಂಜನ್ ಅವರ ಪತ್ನಿ ಆಶಾ ರಂಜನ್ ಅವರು ಅರ್ಜಿ ಸಲ್ಲಿಸಿ ಮಾಡಿದ್ದ ಮನವಿಗೆ ಕೋರ್ಟ್ ಈ ಆದೇಶವಿತ್ತಿದೆ. 
ಶಹಾಬುದ್ದೀನ್ ವಿರುದ್ಧ ಉಳಿದ ಪ್ರಕರಣಗಳನ್ನು ಇನ್ನು ನಾಲ್ಕು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಲು ಪಾಟ್ನಾ ಹೈಕೋರ್ಟ್ ಗೆ ಅಪೆಕ್ಸ್ ಕೋರ್ಟ್ ಸೂಚಿಸಿದೆ. 
SCROLL FOR NEXT