ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ 
ಪ್ರಧಾನ ಸುದ್ದಿ

ಮತ ಚಲಾಯಿಸಿದ ಅಖಿಲೇಶ್; ಮುಲಾಯಂ-ಶಿವಪಾಲ್ ಬಗೆಗಿನ ಪ್ರಶ್ನೆಗೆ ಕುಪಿತ

ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ ಚಲಾಯಿಸಿದರು.

ಸೈಫಾಯಿ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ ಚಲಾಯಿಸಿದರು. 
ತಮ್ಮ ದಾಯಾದಿ ಮತ್ತು ಬೂದ್ಯಾನ್ ನ ಸಂಸದ ಧರ್ಮೇಂದ್ರ ಯಾದವ್ ಅವರೊಂದಿಗೆ, ತಮ್ಮ ಗ್ರಾಮ ಎತವಾದ ಅಭಿನವ್ ವಿದ್ಯಾಲಯ ಚುನಾವಣಾ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಅಖಿಲೇಶ್, ರಾಜ್ಯದ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಸಮಾಜವಾದಿ ಪಕ್ಷಕ್ಕೆ ಮತ ಚಲಾಯಿಸಿರುವುದಾಗಿ ಹೇಳಿದ್ದಾರೆ. 
ಪಕ್ಷದ ಚಿಹ್ನೆ ಹೊತ್ತ ಕೆಂಪು ಟೋಪಿ ಧರಿಸಿ ಬಂದಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್, ಮಾಧ್ಯಮದವರು ಕೇಳಿದ ಕೆಲವು ಅನಿರೀಕ್ಷಿತ ತುಸು ವಿಚಲತರಾದಂತೆ ಕಂಡುಬಂದರು. 
ತಮ್ಮ ಮತವನ್ನು ಬಹಿರಂಗಗೊಳಿಸಿದ್ದು ಏಕೆ ಎಂಬ ಪ್ರಶ್ನೆಗೆ "ನೀವು ಕೇಳಿದ್ದಕ್ಕೆ" ಎಂದು ಉತ್ತರಿಸಿದ ಮುಖ್ಯಮಂತ್ರಿ ಈ ಬಾರಿ ನಿಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಜೊತೆಗೆ ಬರಲಿಲ್ಲವೇಕೆ ಎಂಬ ಪ್ರಶ್ನೆಗೆ ಕುಪುಪಿತರಾದರು. 
ಈ ಪ್ರಶ್ನೆಗೆ ಉತ್ತರಿಸಿದ ಅವರು ಎಸ್ ಪಿ-ಕಾಂಗ್ರೆಸ್ ಮೈತ್ರಿಗೆ ರಾಜ್ಯದ ಜನತೆ ಭಾರಿ ಸಂಖ್ಯೆಯಲ್ಲಿ ಮತದಾನ ಮಾಡಲಿದ್ದಾರೆ ಎಂಬ ಭರವಸೆಯನ್ನು ಕೂಡ ವ್ಯಕ್ತಪಡಿಸಿದರು. 
ಜಸ್ವಂತನಗರದಿಂದ ಸ್ಪರ್ಧಿಸುತ್ತಿರುವ, ಈಗ ತಮ್ಮಿಂದ ದೂರವಾಗಿರುವ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಅವರ ಗೆಲುವಿಗಾಗಿ ಹರಸುತ್ತೀರಿಯೇ ಎಂಬ ಪ್ರಶ್ನೆಗೆ, ಚುನಾವಣೆಯಲ್ಲಿ ಸಮಾಜವಾದಿ ಅಭ್ಯಥಿಗಳು ಗೆಲ್ಲಲು ನಾನು ಹಾರೈಸುತ್ತೇನೆ ಎಂದಿದ್ದಾರೆ. 
ಸಮಾಜವಾದಿ ಪಕ್ಷದಿಂದ ಜನವರಿಯಲ್ಲಿ ಉಚ್ಛಾಟನೆಗೊಂಡ ತಮ್ಮ ತಂದೆ ಮುಲಾಯಂ ಸಿಂಗ್ ಅವರು ನಿಮ್ಮ ಜೊತೆಗೆ ಚುನಾವಣಾ ಸಭೆಗಳಲ್ಲಿ ಭಾಗವಹಿಸಲಿಲ್ಲವೇಕೆ ಎಂಬ ಪ್ರಶ್ನೆಗೆ, ಬಹುಷಃ ಅವರು ಇರರ ಪ್ರದೇಶಗಳ ರ್ಯಾಲಿಗಳಲ್ಲಿ ಭಾವಹಿಸಬೇಕಾಗಿತ್ತು ಎಂದು ಉತ್ತರಿಸಿ ನುಣುಚಿಕೊಂಡಿದ್ದಾರೆ ಅಖಿಲೇಶ್. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!