ಪ್ರಧಾನ ಸುದ್ದಿ

ಅಧ್ಯಕ್ಷ ಅಮಿತ್ ಷಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ಭೋಜಪುರಿ ನಟ ರವಿ ಕಿಶನ್

Guruprasad Narayana
ನವದೆಹಲಿ: ಭೋಜಪುರಿ ನಟ ರವಿ ಕಿಶನ್ ಭಾನುವಾರ ಅಧಿಕೃತವಾಗಿ ಪಕ್ಷದ ಅಧ್ಯಕ್ಷ ಅಮಿತ್ ಷಾ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷ ಸೇರಿದ್ದಾರೆ. 
ರಾಷ್ಟ್ರದ ರಾಜಧಾನಿಯ ಅಶೋಕ ರಸ್ತೆಯಲ್ಲಿ ಬೆಳಗ್ಗೆ ೧೦ ಘಂಟೆಗೆ ಈ ಕಾರ್ಯಕ್ರಮ ಜರುಗಿದೆ. ಪಕ್ಷ ಸೇರಿದ ನಂತರ ಮಾತನಾಡಿದ ರವಿ ಕಿಶನ್ "ಬಡ ಜನರ ಬಗ್ಗೆ ಚಿಂತಿಸುವ ಪಕ್ಷಕ್ಕೆ ಬಂದಿದ್ದೇನೆ. ನನ್ನ ಗಮನ ಅಭಿವೃದ್ಧಿಯ ಕಡೆಗೆ, ಇತರರನ್ನು ಹಳಿಯುವದರತ್ತ ಅಲ್ಲ" ಎಂದಿದ್ದಾರೆ. 
ಬಿಜೆಪಿ ಸಂಸದ ಮನೋಜ್ ತಿವಾರಿ ಟ್ವಿಟ್ಟರ್ ನಲ್ಲಿ ಈ ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ. 
೨೦೧೪ ರಲ್ಲಿ ಕಾಂಗ್ರೆಸ್ ಟಿಕೆಟ್ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಿಶನ್ ಈಗ ಬಿಜೆಪಿ ಪಕ್ಷಕ್ಕೆ ವಾಲಿದ್ದಾರೆ. 
SCROLL FOR NEXT