ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಹವಾಮಾನ ಬದಲಾವಣೆಯಿಂದ ಕಣಿವೆ ಉಳಿಸಿ: ಕಾಶ್ಮೀರ ಯುವ ಚಿತ್ರನಿರ್ದೇಶಕರ ಮನವಿ

ಸಾಮಾನ್ಯವಾಗಿ ಕಾಶ್ಮೀರ ಸುದ್ದಿಯಲ್ಲಿರಿವುದು ಪ್ರತಿಭಟನೆ, ಭಯೋತ್ಪಾದನೆ ಸಂಬಂಧಿ ಚಟುವಟಿಕೆಗಳಿಗೆ ಎನ್ನುವ ಮಾತು ಒಂದು ಕಡೆ. ಆದರೆ ಇಲ್ಲಿ ಈ ಭಾಗದ ಯುವ ನಿರ್ದೇಶಕ ಗುಂಪು ಒಟ್ಟಾಗಿ, ಹವಾಮಾನ

ಕೋಲ್ಕತ್ತಾ: ಸಾಮಾನ್ಯವಾಗಿ ಕಾಶ್ಮೀರ ಸುದ್ದಿಯಲ್ಲಿರಿವುದು ಪ್ರತಿಭಟನೆ, ಭಯೋತ್ಪಾದನೆ ಸಂಬಂಧಿ ಚಟುವಟಿಕೆಗಳಿಗೆ ಎನ್ನುವ ಮಾತು ಒಂದು ಕಡೆ. ಆದರೆ ಇಲ್ಲಿ ಈ ಭಾಗದ ಯುವ ನಿರ್ದೇಶಕ ಗುಂಪು ಒಟ್ಟಾಗಿ, ಹವಾಮಾನ ವೈಪರೀತ್ಯದಿಂದ ಕಣಿವೆಯ ಸೌಂದರ್ಯವನ್ನು ಉಳಿಸುವಂತೆ ತಮ್ಮ ಕಿರುಚಿತ್ರಗಳ ಮೂಲಕ ಮನವಿ ಮಾಡಿದ್ದಾರೆ. 
ಏಳನೇ ರಾಷ್ಟ್ರೀಯ ವಿಜ್ಞಾನ ಸಿನಿಮೋತ್ಸವಕ್ಕೆ ಇತ್ತೀಚೆಗಷ್ಟೇ ತೆರೆಬಿದ್ದಿದ್ದು, ಅಲ್ಲಿ ಪ್ರದರ್ಶನಗೊಂಡ ಕನಿಷ್ಠ ೨ ಚಿತ್ರಗಳು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಹಿಡಿದಿಟ್ಟಿವೆ. 
ಜಲಾಲ್- ಉದ್ ದಿನ್ ಬಾಬಾ ಅವರ 'ಗ್ಲೋಬಲ್ ವಾರ್ಮಿಂಗ್ : ಕಾಶ್ಮೀರ್ ಚಾಪ್ಟರ್' ಎಂಬ ಸಿನೆಮಾದಲ್ಲಿ ಹವಾಮಾನ ಬದಲಾವಣೆಯಿಂದ ತೊಂದರೆಗೆ ಒಳಗಾಗಿರುವ ಮೂವರು ಆರ್ಚರ್ಡ್ ಮಾಲೀಕರ ಕಥೆಯನ್ನು ಹೇಳುತ್ತದೆ. 
ಋತುಗಳ ಬದಲಾವಣೆ, ಚಳಿಗಾಲ ತಡವಾದದ್ದು ಮತ್ತು ಅಕಾಲಿಕ ಹಿಮ ಸುರಿದಿದ್ದರಿಂದ ಆರ್ಚರ್ಡ್ ಗಳು ಮತ್ತು ಅದಕ್ಕೆ ಸಂಬಂಧಿ ವ್ಯವಹಾರಗಳಿಗೆ ಭಾಗಶಃ ಪೆಟ್ಟು ಬಿದ್ದಿದೆ. 
"೨೦೧೪ ರ ಪ್ರವಾಹ, ಜಾಗತಿಕ ತಾಪಮಾನ ಹೆಚ್ಚಿರುವುದಕ್ಕೆ ಪ್ರಕೃತಿ ನೀಡಿದ ಎಚ್ಚರಿಕೆ. ಕಾಶ್ಮೀರದ ಸೌಂದರ್ಯ ಮತ್ತು ರಮ್ಯ ಹೂದೋಟಗಳನ್ನು ಸಂರಕ್ಷಿಸಲು ಜನರಿಗೆ ಈ ಮೂಲಕ ಕರೆಕೊಡುತ್ತಿದ್ದೇವೆ" ಎಂದಿದ್ದಾರೆ ಉತ್ಸವದಲ್ಲಿ ಪ್ರಶಸ್ತಿ ಪಡೆದ ಬಾಬಾ. 
"ಕ್ಲೈಮೇಟ್ ಚೇಂಜ್ ಅಡಾಪ್ಟೆಶನ್ ಇನ್ ಲಿದ್ಧರ್ ವ್ಯಾಲಿ' ಸಾಕ್ಷ್ಯಚಿತ್ರದ ನಿರ್ದೇಶಕ ತಾರಿಕ್ ಅಬ್ದುಲ್ಲಾ ಹವಾಮಾನ ಬದಲಾವಣೆಗೆ ಲಿದ್ಧರ್ ಕಣಿವೆಯ ಜನ ಹೇಗೆ ಹೊಂದಿಕೊಂಡಿದ್ದಾರೆ ಎಂದು ಸೆರೆಹಿಡಿದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್‌

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ