ಎಂ.ಕೆ.ಸ್ಟಾಲಿನ್ 
ಪ್ರಧಾನ ಸುದ್ದಿ

ಪಳನಿಸ್ವಾಮಿ ವಿಶ್ವಾಸಮತದ ವಿರುದ್ಧ ಡಿಎಂಕೆಯಿಂದ ಉಪವಾಸ ಸತ್ಯಾಗ್ರಹ

ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರ ವಿಶ್ವಾಸ ಮತವನ್ನು ಖಂಡಿಸಿ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್...

ತಿರುಚಿರಾಪಳ್ಳಿ: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರ ವಿಶ್ವಾಸ ಮತವನ್ನು ಖಂಡಿಸಿ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಬುಧವಾರ ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅಲ್ಲದೆ ಅವರನ್ನು ಬೆಂಬಲಿಸಿ ಡಿಎಂಕೆ ನಾಯಕರು ತಮಿಳುನಾಡಿನಾದ್ಯಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಸ್ಟಾಲಿನ್ ಅವರು ಇಂದು ಬೆಳಗ್ಗೆ 9 ಗಂಟೆಯಿಂದ ಉಪವಾಸ ನಡೆಸುತ್ತಿದ್ದು, ಅವರಿಗೆ ಡಿಎಂಕೆ ಹಿರಿಯ ನಾಯಕ ಕೆ.ಎನ್.ನೆಹರೂ ಅವರು ಸಾಥ್ ನೀಡಿದ್ದಾರೆ.
ಫೆಬ್ರವರಿ 18ರಂದು ವಿಧಾನಸಭೆಯಲ್ಲಿ ಪಳನಿಸ್ವಾಮಿ ಅವರು ಅಕ್ರಮವಾಗಿ ವಿಶ್ವಾಸ ಮತ ಗೆದ್ದಿದ್ದು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಡಿಎಂಕೆ ಆರೋಪಿಸಿದೆ. ಡಿಎಂಕೆ ಶಾಸಕರನ್ನು ಬಲವಂತವಾಗಿ ಸದನದಿಂದ ಹೊರಗಿಟ್ಟು ವಿಶ್ವಾಸಮತಕ್ಕೆ ಅವಕಾಶ ನೀಡಿದ್ದು ಕಾನೂನು ಬಾಹಿರ ಮತ್ತು ಸದನದ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಈ ಮಧ್ಯೆ, ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರು ತಮಿಳುನಾಡು ವಿಧಾನಸಭೆಯ ಸ್ಪೀಕರ್ ಪ್ರತಿಪಕ್ಷಗಳ ಬೇಡಿಕೆಯನ್ನು ಪರಿಗಣಿಸಿ ರಹಸ್ಯ ಮತದಾನಕ್ಕೆ ಅವಕಾಶ ನೀಡಬೇಕಾಗಿತ್ತು ಮತ್ತು ಅದು ಅವರ ಕರ್ತವ್ಯ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು