ಪ್ರಧಾನ ಸುದ್ದಿ

ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ಭೇಟಿ ಮಾಡಿದ ತಮಿಳುನಾಡಿನ ನಾಲ್ವರು ಸಚಿವರು

Lingaraj Badiger
ಬೆಂಗಳೂರು: ತಮಿಳುನಾಡಿನ ನಾಲ್ವರು ಸಚಿವರು ಮಂಗಳವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರೊಂದಿಗೆ ಮಾತುಕತೆ ನಡೆಸಿದರು.
ತಮಿಳುನಾಡು ಸಚಿವರಾದ ಕೆಎಸ್ ಸೆಂಗೊಟ್ಟಯನ್, ಕಾಮರಾಜ್, ದಿಂಡಿಗುಲ್ ಶ್ರೀನಿವಾಸನ್ ಹಾಗೂ ಸೆಲ್ಲೂರ್ ಕೆ ರಾಜು ಅವರು ಇಂದು ಬೆಳಗ್ಗೆ ಶಶಿಕಲಾ ಅವರನ್ನು ಭೇಟಿ ಮಾಡಿದ್ದಾರೆ.
ಕಳೆದ ಪೆಬ್ರವರಿ 14ರಂದು ಬೆಂಗಳೂರಿನ ವಿಶೇಷ ನ್ಯಾಯಾಲಯದ ತೀರ್ಪು ಎತ್ತಿಹಿಡಿದಿದ್ದ ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠ, ಶಶಿಕಲಾಗೆ 4 ವರ್ಷ ಜೈಲು ಹಾಗೂ 10 ಕೋಟಿ ರು. ದಂಡ ವಿಧಿಸಿ ತೀರ್ಪು ಪ್ರಕಟಿಸಿತು. ಶಶಿಕಲಾ ಜೊತೆಗೆ ಇಳವರಸಿ ಹಾಗೂ ಸುಧಾಕರನ್ ಕೂಡ ದೋಷಿಗಳೆಂದು ಸಾಬೀತಾಗಿದ್ದು, ಸದ್ಯ ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ.
SCROLL FOR NEXT