ಕೋಲ್ಕತ್ತಾ: ಬಹುಷಃ ನೆರೆಯ ಬಿಹಾರದಿಂದ ಪಶ್ಚಿಮ ಬಂಗಾಳದ ರೈಗಂಜ್ ಪಟ್ಟಣಕ್ಕೆ ಬಂದ ಚಿರತೆಯೊಂದು ದಾಳಿ ಮಾಡಿಗೆ ಹಲವರಿಗೆ ಗಾಯ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅರಣ್ಯ ಅಧಿಕಾಯೊಬ್ಬರು ಹೇಳುರವಂತೆ ಉತ್ತರ ದಿನಜಪುರ ಮನೆಯಲ್ಲಿ ಸೇರಿಕೊಂಡಿರುವ ಚಿರತೆಗೆ ಅರಿವಳಿಕೆ ಮದ್ದು ನೀಡಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.
" ಈ ಚಿರತೆ ಬಿಹಾರದಿಂದ ಬಂದಿರಬಹುದು ಎಂದು ಊಹಿಸಿದ್ದೇವೆ ಏಕೆಂದರೆ ಬಂಗಾಳದ ಈ ಭಾಗದಲ್ಲಿ ಚಿರತೆಗಳಲ್ಲಿ" ಎಂದು ಮುಖ್ಯ ಅರಣ್ಯ ವಾರ್ಡನ್ ಪ್ರದೀಪ್ ವ್ಯಾಸ್ ಹೇಳಿದ್ದಾರೆ.
ಚಿರತೆ ಸೇರಿಕೊಂಡಿರುವ ಮನೆಯಿಂದ ತಪ್ಪಿಸಿಕೊಳ್ಳದಂತೆ ನೈಲಾನ್ ನೆಟ್ ಬೀಸಲಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಕ ಅಧಿಕಾರಿ ಕೂಡ ಆಗಿರುವ ವ್ಯಾಸ್ ಹೇಳಿದ್ದಾರೆ.