ಇಂಫಾಲ್: ಎ ಎಫ್ ಎಸ್ ಪಿ ಎ ಹಿಂಪಡೆಯುವಂತೆ ಆಗ್ರಹಿಸಿ ೧೬ ವರ್ಷಗಳ ಕಾಲ ಉಪವಾಸ ಮಾಡಿದ್ದ ಇರೋಮ್ ಶರ್ಮಿಳಾ ಅವರು ಮುಂದಿನ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್ ವಿರುದ್ಧ ಸ್ಪರ್ಧಿಸಲಿದ್ದಾರೆ.
ಶಸ್ತ್ರಾಸ್ತ್ರ ಪಡೆಗಳ ವಿಶೇಷ ಕಾಯ್ದೆ (ಎ ಎಫ್ ಎಸ್ ಪಿ ಎ) ಹಿಂಪಡೆಯುವಂತೆ ಉಪವಾಸ ಸತ್ಯಾಗ್ರಹ ನಡೆಸಿದ್ದ ಇರೋಮ್ ಶರ್ಮಿಳಾ ಕಳೆದ ವರ್ಷ ಆಗಸ್ಟ್ ೯ ರಂದು ಉಪವಾಸವನ್ನು ನಿಲ್ಲಿಸಿದ್ದರು.
ಥೊಬುಲ್ ಕ್ಷೇತ್ರದಿಂದ ಆಯ್ಕೆಯಾಗಿರುವ ಇಬೋಬಿ ಸಿಂಗ್ ಮೂರು ಅವಧಿಗಳಿಗೆ ಮುಖ್ಯಮಂತ್ರಿಯಾಗಿದ್ದಾರೆ.
"ಅವರ ೧೫ ವರ್ಷಗಳ ಮುಂದಾಳತ್ವದಲ್ಲಿ, ಎ ಎಫ್ ಎಸ್ ಪಿ ಎ ಹಿಂಪಡೆಯುವಂತೆ ಮಾಡಲು ಅವರೇನೂ ಮಾಡಿಲ್ಲ. ಬೇರೆ ಯಾವ ನಾಯಕರು ಇದನ್ನು ಮಾಡುವುದಿಲ್ಲ ಎಂದು ನನಗೆ ಮನವರಿಕೆ ಆಗಿದೆ. ಆದುದರಿಂದ ಮುಖ್ಯಮಂತ್ರಿ ಎದುರು ನಾನು ಸ್ಪರ್ಧಿಸಲು ಯೋಜಿಸುತ್ತಿದ್ದು, ಅದನ್ನು ಹಿಂತೆಗೆದುಕೊಳ್ಳುವಂತೆ ಮಾಡುತ್ತೇನೆ" ಎಂದು ಶರ್ಮಿಳಾ ಹೇಳಿದ್ದಾರೆ.
ಮುಖ್ಯಮಂತ್ರಿಯವರು ಸತ್ಯ ಹೇಳುತ್ತಿಲ್ಲ ಎಂದು ಕೂಡ ಶರ್ಮಿಳಾ ದೂರಿದ್ದಾರೆ.