ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಕಾಸರಗೋಡಿನಲ್ಲಿ ಮೂರು ದಿನಗಳ ನಿಷೇಧಾಜ್ಞೆ

ಬುಧವಾರದಿಂದ ಶುಕ್ರವಾರದವರೆಗೆ ಸಾರ್ವಜನಿಕವಾಗಿ ಗುಂಪು ಕಟ್ಟದಂತೆ ಮತ್ತು ಯಾವುದೇ ಸಭೆ, ರ್ಯಾಲಿಗಳನ್ನು ನಡೆಸದಂತೆ ಕಾಸರಗೋಡು ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ಥಾಮ್ಸನ್ ಜೋಸ್

ಕಾಸರಗೋಡು: ಬುಧವಾರದಿಂದ ಶುಕ್ರವಾರದವರೆಗೆ ಸಾರ್ವಜನಿಕವಾಗಿ ಗುಂಪು ಕಟ್ಟದಂತೆ ಮತ್ತು ಯಾವುದೇ ಸಭೆ, ರ್ಯಾಲಿಗಳನ್ನು ನಡೆಸದಂತೆ ಕಾಸರಗೋಡು ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ಥಾಮ್ಸನ್ ಜೋಸ್ ನಿಷೇಧಾಜ್ಞೆ ಹೇರಿದ್ದಾರೆ. 
ಸೋಮವಾರ ಮತ್ತು ಮಂಗಳವಾರ ಕಾಸರಗೋಡು ಪಟ್ಟಣದ ಚೆರುವತೂರ್ ನಲ್ಲಿ ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರು ಘರ್ಷಣೆ ನಡೆಸಿ, ಹಿಂಸೆಗೆ ತಿರುಗಿರುವ ಹಿನ್ನಲೆಯಲ್ಲಿ ಈ ಎಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ. 
ಶಾಂತಿ ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಎಚ್ಚರಿಕೆ, ಕೇರಳ ಪೊಲೀಸ್ ಕಾಯ್ದೆ ೭೮ ಮತ್ತು ೭೯ ರಡಿ ಈ ನಿಷೇಧಾಜ್ಞೆ ಹೇರಲಾಗಿದೆ. ಮೂರೂ ದಿನಗಳ ನಂತರ ಇದನ್ನು ಮರುಪರಿಶೀಲನೆ ನಡೆಸಲಾಗುತ್ತದೆ. ಈ ನಿಯಮಗಳಿಡಿ, ೧೫ ದಿನಗಳವರೆಗೆ ನಿಷೇಧಾಜ್ಞೆ ಹೇರುವ ಅವಕಾಶವಿರುತ್ತದೆ. 
ಮಂಗಳವಾರ ಬಿಜೆಪಿ ಪಕ್ಷ ಕರೆದಿದ್ದ ಮುಷ್ಕರ ಕಾಸರಗೋಡು ಮತ್ತು ಸುತ್ತಮುತ್ತಲಿನ ಪಟ್ಟಣಗಳಲ್ಲಿ ಹಿಂಸೆಗೆ ತಿರುಗಿತ್ತು. ಮುಷ್ಕರದ ಬೆಂಬಲಿಗರು ಕಾರ್ ಗಳು, ಅಂಗಡಿ, ಬ್ಯಾಂಕ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ, ತಡೆಯಲು ಬಂದ ಪೋಲೀಸರ ಜೊತೆಗೂ ಘರ್ಷಣೆಗೆ ಇಳಿದಿದ್ದರು. ಸೋಮವಾರ ಚೆರುವತೂರ್ ನಲ್ಲಿ 'ರಾಜಕೀಯ ಸ್ವಾತಂತ್ರ್ಯಕ್ಕಾಗಿ ನಡಿಗೆ' ರ್ಯಾಲಿಗೆ ಸಿಪಿಎಂ ಕಾರ್ಯಕರ್ತರು ಅಡ್ಡಿಪಡಿಸಿದರು ಎಂದು ದೂರಿ ಮುಷ್ಕರಕ್ಕೆ ಕರೆಕೊಟ್ಟಿದ್ದರು. 
ಬುಧವಾರ ಸಂಜೆ, ಪ್ರತಿಭಟನಾ ಸಭೆ ಕರೆದಿದ್ದ ಸಿಪಿಎಂ ನಿಷೇಧಾಜ್ಞೆ ಹಿನ್ನಲೆಯಲ್ಲಿ ಅದನ್ನು ಹಿಂದಕ್ಕೆ ತೆಗೆದುಕೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!