ಬಿಜೆಪಿ ಮುಖಂಡ ಮನೋಜ್ ತಿವಾರಿ 
ಪ್ರಧಾನ ಸುದ್ದಿ

ವಿಡಿಯೋ ಉದ್ದೇಶ ತಿರುಚಿ ಟ್ವೀಟ್; ಕೇಜ್ರಿವಾಲ್ ತಂಡವನ್ನು ಟೀಕಿಸಿದ ಮನೋಜ್ ತಿವಾರಿ

ನೋಟು ಹಿಂಪಡೆತ ನಿರ್ಧಾರದ ನಂತರ ಎಟಿಎಂಗಳ ಎದುರು ನಿಂತ ಜನರನ್ನು ದೆಹಲಿ ಬಿಜೆಪಿ ಮುಖಂಡ ಮನೋಜ್ ತಿವಾರಿ ಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿ ತಮ್ಮ ವಿಡಿಯೋವೊಂದು ವೈರಲ್

ನವದೆಹಲಿ: ನೋಟು ಹಿಂಪಡೆತ ನಿರ್ಧಾರದ ನಂತರ ಎಟಿಎಂಗಳ ಎದುರು ನಿಂತ ಜನರನ್ನು ದೆಹಲಿ ಬಿಜೆಪಿ ಮುಖಂಡ ಮನೋಜ್ ತಿವಾರಿ ಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿ ತಮ್ಮ ವಿಡಿಯೋವೊಂದು ವೈರಲ್ ಮಾಡಿರುವುದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ತಂಡ ಕಾರಣ ಎಂದು ಮನೋಜ್ ದೂರಿದ್ದಾರೆ. 
ದೆಹಲಿ ಸರ್ಕಾರದ ಕೆಲಸದ ಬಗ್ಗೆ ನಾನು ನೈಜ ತಪಾಸಣೆ ಮಾಡುತ್ತಿರುವುದರಿಂದ ಎಎಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ದೆಹಲಿಯಿಂದ ಬಿಜೆಪಿ ಸಂಸದರು ಆಗಿರುವ ತಿವಾರಿ ಆರೋಪಿಸಿದ್ದಾರೆ. 
"ನನ್ನ ವಿಡಿಯೋ ಒಂದು ವೈರಲ್ ಆಗಿದೆ ಮತ್ತು ಇದನ್ನು ಮಾಡಿರುವವರು ಅರವಿಂದ್ ಕೇಜ್ರಿವಾಲ್ ಮತ್ತು ತಂಡ" ಎಂದು ತಿವಾರಿ ಹೇಳಿದ್ದಾರೆ. 
ಮಂಗಳವಾರ ಬೆಳಗ್ಗೆ ಈ ವಿಡಿಯೋ ಟ್ವೀಟ್ ಮಾಡಿದ್ದ ದೆಹಲಿ ನೀರು ಸರಬರಾಜು ಸಚಿವ ಕಪಿಲ್ ಮಿಶ್ರಾ "ದೆಹಲಿ ಜನರನ್ನು ಅಪಹಾಸ್ಯ ಮಾಡುತ್ತಿರುವ ಮನೋಜ್ ತಿವಾರಿ ಅವರ ಈ ವಿಡಿಯೋ ನಾಚಿಕೆಗೇಡು ಮತ್ತು ಅಸಹ್ಯ" ಎಂದು ಬರೆದಿದ್ದರು. 
"ಹಾಡಿನ ಮೂಲಕ ಎಟಿಎಂ ಎದುರು ನಿಂತ ಜನರನ್ನು ಮನೋಜ್ ತಿವಾರಿ ಅಪಹಾಸ್ಯ ಮಾಡಿದ್ದಾರೆ" ಎಂದು ಅವರು ಹೇಳುತ್ತಿದ್ದಾರೆ ಎಂದಿರುವ ತಿವಾರಿ "ನಾನು ಎಟಿಎಂ ಎದುರು ನಿಂತ ಜನರಿಗೆ ಉತ್ತೇಜನ ನೀಡಲು ಆ ಹಾಡು ಹಾಡಿದ್ದು. ಪ್ರಧಾನಿ ನರೇಂದ್ರ ಮೋದಿಯವರ ನೋಟು ಹಿಂಪಡೆತ ಕ್ರಮದಿಂದ ತೊಂದ ಅನುಭವಿಸುತ್ತಿದ್ದ ಜನರ ಹಿತಕ್ಕಾಗಿ ಅದನ್ನು ಮಾಡಿದ್ದು" ಎಂದಿದ್ದಾರೆ. 
"ಪ್ರಧಾನ ಮಂತ್ರಿ ಅವರು ೫೦ ದಿನ ಕಷ್ಟಗಳನ್ನು ಸಹಿಸಿಕೊಳ್ಳಲು ಕೋರಿದ್ದರು ಮತ್ತು ದೇಶದ ಹಿತಕ್ಕಾಗಿ ಜನ ಅದಕ್ಕೆ ಸಿದ್ಧಾರಾಗಿದ್ದರು ಮತ್ತು ನಾನು ಕೈಜೋಡಿಸಿದೆ" ಎಂದು ಕೂಡ ತಿವಾರಿ ಹೇಳಿದ್ದಾರೆ. 
"ಅರವಿಂದ್ ಕೇಜ್ರಿವಾಲ್ ಆವರೇ, ಇದನ್ನು ನೀವು ತಿರುಚುತ್ತಿರುವುದೇಕೆ" ಎಂದು ಕೂಡ ತಿವಾರಿ ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!