ಪ್ರಧಾನ ಸುದ್ದಿ

ಬೇಷರತ್ ಕ್ಷಮೆಯಾಚಿಸಿದ ನ್ಯಾ.ಕಾಟ್ಜು, ನ್ಯಾಯಾಂಗ ನಿಂದನೆ ಕೇಸ್ ಅಂತ್ಯಗೊಳಿಸಿದ ಸುಪ್ರೀಂ

Lingaraj Badiger
ನವದೆಹಲಿ: ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಬೇಷರತ್‌ ಕ್ಷಮೆ ಯಾಚಿಸಿದ್ದು, ಸರ್ವೋಚ್ಚ ನ್ಯಾಯಾಲಯ ಅವರ ವಿರುದ್ಧದ ನ್ಯಾಯಾಂಗ ನ್ಯಾಯಾಂಗ ನಿಂದನೆ ಪ್ರಕರಣವನ್ನು ಅಂತ್ಯಗೊಳಿಸಿದೆ.
ನಿವೃತ್ತ ನ್ಯಾಯಮೂರ್ತಿಯನ್ನು ಮನ್ನಿಸಿರುವ ನ್ಯಾ.ರಂಜನ್‌ ಗೊಗೊಯ್‌ ಮತ್ತು ನ್ಯಾ.ಯು.ಯು.ಲಲಿತ್‌ ಅವರನ್ನು ಒಳಗೊಂಡ ನ್ಯಾಯಪೀಠ, ನ್ಯಾಯಾಂಗ ನಿಂದನೆ ಪ್ರಕರಣವನ್ನು ಅಂತ್ಯಗೊಳಿಸಿ ಆದೇಶ ನೀಡಿದೆ.
ಇಂದು ನ್ಯಾ.ಮಾರ್ಕಂಡೇಯ ಕಾಟ್ಜು ಅವರ ಪರವಾಗಿ ಹಿರಿಯ ನ್ಯಾಯವಾದಿ ರಾಜೀವ್‌ ಧವನ್‌ ಕೋರ್ಟ್‌ಗೆ ಕ್ಷಮೆಯಾಚನೆ ಪ್ರತಿ ಓದಿ ತಿಳಿಸಿದರು.
ನ್ಯಾಯಾಂಗದ ಬಗ್ಗೆ ಅಸಮರ್ಪಕ ಭಾಷೆ ಬಳಸಿ ಅವಮಾನ ಮಾಡಿದ ಆರೋಪ ಎದುರಿಸುತ್ತಿದ್ದ ಕಾಟ್ಜು ಅವರು, ಕೇರಳದ ಯುವತಿ ಸೌಮ್ಯ ಕೊಲೆ ಪ್ರಕರಣದ ತೀರ್ಪನ್ನು ಟೀಕಿಸಿ ನ್ಯಾಯಾಂಗದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
SCROLL FOR NEXT