ಮುಲಾಯಂ ಸಿಂಗ್ ಯಾದವ್ ಮಾತು ಅಖಿಲೇಶ್ ಯಾದವ್ 
ಪ್ರಧಾನ ಸುದ್ದಿ

ಅಖಿಲೇಶ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ: ಮುಲಾಯಂ

ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಪುತ್ರ ಅಖಿಲೇಶ್ ಯಾದವ್ ಹಾಗು ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.

ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಪುತ್ರ ಅಖಿಲೇಶ್ ಯಾದವ್ ಹಾಗು ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ. 
ಚುನಾವಣಾ ಆಯೋಗದ ಆಯುಕ್ತ ನಸೀಮ್ ಜೈದಿ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಲಾಯಂ, ಒಬ್ಬ ವ್ಯಕ್ತಿಯಷ್ಟೇ ಪಕ್ಷದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದು ಎಂದು ಪರೋಕ್ಷವಾಗಿ ರಾಮ್ ಗೋಪಾಲ್ ಯಾದವ್ ಅವರ ವಿರುದ್ಧ ದೂರಿದ್ದಾರೆ.
"ನನ್ನ ಮಗನನ್ನ (ಅಖಿಲೇಶ್) ಪ್ರಭಾವಿಸಿರುವ ಕೆಲವರಿದ್ದಾರೆ. ಕಳೆದ ರಾತ್ರಿ ಮತ್ತು ಇಂದು ಬೆಳಗ್ಗೆ ಅವನೊಂದಿಗೆ ನೇರವಾಗಿ ಮಾತನಾಡಿದ್ದೇನೆ. ನನ್ನ ಪುತ್ರ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. 
"ಪಕ್ಷದಲ್ಲಿ ಕೆಲವೊಂದು ವಿವಾದಗಳಿವೆ, ದೊಡ್ಡವೇನಲ್ಲ. ಒಬ್ಬನೇ ವ್ಯಕ್ತಿ ಇದಕ್ಕೆ ಕಾರಣ. ಅದನ್ನು ಶೀಘ್ರದಲ್ಲೇ ಪರಿಹರಿಸಲಾಗುತ್ತದೆ" ಎಂದು ಕೂಡ ಅವರು ಹೇಳಿದ್ದಾರೆ. 
ತಾವಿನ್ನು ಪಕ್ಷದ ಅಧ್ಯಕ್ಷರಾಗಿದ್ದು, ಅಖಿಲೇಶ್ ಯಾದವ್ ಕೇವಲ ಮುಖ್ಯಮಂತ್ರಿ ಎಂದು ಭಾನುವಾರ ಮುಲಾಯಂ ಹೇಳಿದ್ದರು. 
ಅಖಿಲೇಶ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಸ್ಥಾಪಿಸಲು ಅಖಿಲೇಶ್ ಬಣ ಜನವರಿ ೧ ರಂದು ನಿರ್ಣಯಿಸಿತ್ತು. ಅಂದಿನಿಂದಲೂ ಎರಡು ಬಣಗಳು ಪಕ್ಷದ ಚಿಹ್ನೆ 'ಸೈಕಲ್' ಒಡೆತನಕ್ಕಾಗಿ ಚುನಾವಣಾ ಆಯೋಗದೆದುರು ಹಗ್ಗ ಜಗ್ಗಾಟ ನಡೆಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್