ಪ್ರಧಾನ ಸುದ್ದಿ

'ಪಕ್ಷದಿಂದ ರಾಮ್ ಗೋಪಾಲ್ ಉಚ್ಚಾಟನೆ, ರಾಜ್ಯಸಭಾ ಸ್ಥಾನ ಬದಲಾವಣೆ'

Lingaraj Badiger
ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಆಪ್ತ ರಾಮ್ ಗೋಪಾಲ್ ಯಾದವ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದ್ದು, ಅವರನ್ನು ಪಕ್ಷದ ರಾಜ್ಯಸಭಾ ನಾಯಕ ಸ್ಥಾನದಿಂದ ಬದಲಾವಣೆ ಮಾಡುವಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಸೋಮವಾರ ರಾಜ್ಯಸಭಾ ಅಧ್ಯಕ್ಷ ಹಮಿದ್ ಅನ್ಸಾರಿ ಅವರಿಗೆ ಪತ್ರ ಬರೆದಿದ್ದಾರೆ.
ಪಕ್ಷದಿಂದ ಉಚ್ಚಾಟಿತರಾಗಿರುವ ರಾಮ್ ಗೋಪಾಲ್ ಯಾದವ್ ಅವರ ಸ್ಥಾನವನ್ನು ರಾಜ್ಯಸಭೆಯ ಮೊದಲ ಸಾಲಿನಿಂದ ಹಿಂದಿನ ಸ್ಥಾನಕ್ಕೆ ಸ್ಥಳಾಂತರಿಸುವಂತೆ ಮುಲಾಯಂ ಅನ್ಸಾರಿಗೆ ಮನವಿ ಮಾಡಿದ್ದಾರೆ. ರಾಮ್ ಗೋಪಾಲ್ ಅವರು ಇದುವರೆಗೆ ಮುಂದಿನ ಸಾಲಿನಲ್ಲಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರು.
ರಾಮ್ ಗೋಪಾಲ್ ಯಾದವ್ ಅವರನ್ನು ಡಿಸೆಂಬರ್ 30, 2016ರಂದು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದ್ದು, ರಾಜ್ಯಸಭೆಯ ಸಮಾಜವಾದಿ ಪಕ್ಷದ ಸಂಸದೀಯ ನಾಯಕನ ಸ್ಥಾನ ಕಳೆದುಕೊಂಡಿದ್ದಾರೆ ಎಂದು ಮುಲಾಯಂ ತಿಳಿಸಿದ್ದಾರೆ. ಆದರೆ ಪಕ್ಷದ ಹೊಸ ಸಂಸದೀಯ ನಾಯಕನ ಬಗ್ಗೆ ಮುಲಾಯಂ ಯಾವುದೇ ಪ್ರಸ್ತಾಪ ಮಾಡಿಲ್ಲ.
SCROLL FOR NEXT