ನವದೆಹಲಿ: ಕೇಂದ್ರ ಸರ್ಕಾರ ಬಜೆಟ್ ಮಂಡನೆ ದಿನಾಂಕವನ್ನು ಹಿಂದಕ್ಕೆ ಹಾಕಿರುವುದಕ್ಕೆ ತಡೆ ಹಾಕಲು ಕಾನೂನಿನಲ್ಲಿ ಯಾವುದೇ ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಸಾಮಾನ್ಯವಾಗಿ ಫೆಬ್ರವರಿ ಕೊನೆಯ ದಿನದಂದು ಮಂಡಿಸಲಾಗುತ್ತಿದ್ದ ಬಜೆಟ್ ಅನ್ನು, ೨೦೧೭-೧೮ ರ ಬಜೆಟ್ ಫೆಬ್ರವರಿ ೧ ಕ್ಕೆ ಮಂಡಿಸಲು ಸರ್ಕಾರ ನಿರ್ಣಯಿಸಿದೆ.
ಸರ್ಕಾರದ ನಿರ್ಧಾರದ ವಿರುದ್ಧ ವಾದಿಸಲು ಅಂತಹ ಯಾವುದೇ ಅವಕಾಶ ಕಾನೂನಿನಲ್ಲಿ ಇದೆಯೇ ಎಂದು ಕೂಡ ಅರ್ಜಿದಾರನಿಗೆ ಕೋರ್ಟ್ ಪ್ರಶ್ನಿಸಿದೆ.
ಮುಖ್ಯ ನ್ಯಾಯಾಧೀಶ ಜಗದೀಶ್ ಸಿಂಗ್ ಖೇಹರ್ ಮತ್ತು ನ್ಯಾಯಾಧೀಶ ಡಿ ವೈ ಚಂದ್ರಚೂಡ್ ಒಳಗೊಂಡ ಪೀಠ, ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಕೀಲ ಎಂ ಎಲ್ ಶರ್ಮ ಅವರಿಗೆ, ಕಾನೂನಿನಲ್ಲಿ ತಡೆ ಹಾಕಲು ಯಾವುದೇ ನಿಯಮಗಳಿದ್ದರೆ ತಿಳಿಸಿ ಎಂದಿದ್ದು "ಅಂತಹ ನಿಬಂಧನೆಗಳಿಗಾಗಿ ಹುಡುಕಾಡಿದೆವು, ಆದರೆ ಸಿಗಲಿಲ್ಲ" ಎಂದಿದೆ.
ಬಜೆಟ್ ಮಂಡನೆಯನ್ನು ಹಿಂದೂಡಿ ತೆಗೆದುಕೊಂಡಿರುವ ನಿರ್ಣಯ "ಯಾವ ಕಾನೂನನ್ನು ಉಲ್ಲಂಘಿಸಲಾಗಿದೆ ಅಥವಾ ಸಂವಿಧಾನದ ಯಾವ ನಿಯಮವನ್ನು ಉಲ್ಲಂಘಿಸಿದೆ" ಎಂದು ತಿಳಿಸುವಂತೆ ಶರ್ಮ ಅವರಿಗೆ ಕೋರ್ಟ್ ಕೇಳಿದ್ದು, ಇದಕ್ಕಾಗಿ ಜನವರಿ ೨೦ ರವರೆಗೆ ಕಾಲಾವಕಾಶವನ್ನು ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics