ಹೈದರಾಬಾದ್: ಸಂಶಯಾತ್ಮಕ ಸನ್ನಿವೇಶದಲ್ಲಿ ಕರ್ನಾಟಕ ಮೂಲದ ಯುವತಿಯೊಬ್ಬರ ಶವ ಪಿ ವಿ ಎನ್ ಆರ್ ಎಕ್ಸ್ಪ್ರೆಸ್ ವೇನಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐ ಟಿ ನಗರಿ ಹೈಟೆಕ್ ಸಿಟಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ೨೨ ವರ್ಷದ ಕಾವ್ಯ ಶ್ರೀ ಅವರ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವುಂಟಾಗಿತ್ತು ಎಂದು ಕೂಡ ಪೊಲೀಸರು ಹೇಳಿದ್ದಾರೆ.
ಅವರ ಕೈಚೀಲ, ಪಾದರಕ್ಷೆ, ಮೊಬೈಲ್ ಫೋನ್ ಮತ್ತು ಗುರುತಿನ ಚೀಟಿಗಳು ದೇಹದ ಬಳಿ ಪತ್ತೆಯಾಗುವೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇದು ಗುದ್ದಿ ಪರಾರಿಯಾದ ಪ್ರಕರಣವೋ ಅಥವಾ ವಾಹನದಿಂದ ಎಸೆದು ಹೋಗಿದ್ದರೋ ಎಂದು ತಿಳಿಯಲು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಸರ್ಕಾರಿ ಒಡೆತನದ ಒಸ್ಮಾನಿಯಾ ಆಸ್ಪತ್ರೆಗೆ ಶವಪರೀಕ್ಷೆಗಾಗಿ ದೇಹವನ್ನು ಕಳುಹಿಸಲಾಹಿದೆ.
ಪಿ ವಿ ಎನ್ ಆರ್ ಎಕ್ಸ್ಪ್ರೆಸ್ ವೇ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಶಂಷಾಬಾದ್ ನಡುವೆ ಸಂಪರ್ಕ ಕಲ್ಪಿಸುತ್ತದೆ.