ಪ್ರೊ. ಯು.ಆರ್. ರಾವ್, ಕೆ.ಜೆ. ಯೇಸುದಾಸ್ ಗೆ ಪದ್ಮವಿಭೂಷಣ ಪ್ರಶಸ್ತಿ
ಕನ್ನಡದ ಹಿರಿಯ ಚಿತ್ರನಟಿ ಭಾರತಿ ವಿಷ್ಣುವರ್ಧನ್, ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ, ವಿಜ್ಞಾನಿ ಪ್ರೊ. ಯು.ಆರ್. ರಾವ್, ಸುಕ್ರಿ ಬೊಮ್ಮಗೌಡ, ಕ್ರೀಡಾಪಟು ವಿಕಾಸ್ ಗೌಡ ಸೇರಿದಂತೆ...
ನವದೆಹಲಿ: ಕನ್ನಡದ ಹಿರಿಯ ಚಿತ್ರನಟಿ ಭಾರತಿ ವಿಷ್ಣುವರ್ಧನ್, ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ, ವಿಜ್ಞಾನಿ ಪ್ರೊ. ಯು.ಆರ್. ರಾವ್, ಸುಕ್ರಿ ಬೊಮ್ಮಗೌಡ, ಕ್ರೀಡಾಪಟು ವಿಕಾಸ್ ಗೌಡ ಸೇರಿದಂತೆ ರಾಜ್ಯದ ಏಳು ಗಣ್ಯರು 2017ನೇ ಸಾಲಿನ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ಈ ವರ್ಷ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ 89 ಗಣ್ಯರಿಗೆ ನೀಡಲಾಗಿದ್ದು, ಅವರಲ್ಲಿ 7 ಮಂದಿ ಪದ್ಮ ವಿಭೂಷಣ, 7 ಮಂದಿ ಪದ್ಮ ಭೂಷಣ ಮತ್ತು 75 ಮಂದಿ ಪದ್ಮಶ್ರೀ ಪ್ರಶಸ್ತಿ ಗಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಕೇಂದ್ರ ಗೃಹ ಇಲಾಖೆ ಬಿಡುಗಡೆ ಮಾಡಿದೆ.
ಪದ್ಮ ವಿಭೂಷಣ:
ಪ್ರೊ. ಯು.ಆರ್. ರಾವ್ - ವಿಜ್ಞಾನ
ಪ್ರೊ. ಯು.ಆರ್. ರಾವ್ - ವಿಜ್ಞಾನ
ಕೆ.ಜೆ.ಯೇಸುದಾಸ್ - ಸಂಗೀತ
ಸದ್ಗುರು ಜಗ್ಗಿ ವಾಸುದೇವ - ಆಧ್ಯಾತ್ಮ
ಶರದ್ ಪವಾರ್ - ಸಾರ್ವಜನಿಕ ವ್ಯವಹಾರ
ಮುರಳಿ ಮನೋಹರ ಜೋಷಿ- ಸಾರ್ವಜನಿಕ ವ್ಯವಹಾರ
ಸುಂದರ್ ಲಾಲ್ ಪಟ್ವಾ - ಸಾರ್ವಜನಿಕ ವ್ಯವಹಾರ
ಪಿ.ಎ.ಸಂಗ್ಮಾ (ಮರಣೋತ್ತರ) - ಸಾರ್ವಜನಿಕ ವ್ಯವಹಾರ
ಪದ್ಮ ಭೂಷಣ ಪುರಸ್ಕೃತರು:
ವಿಶ್ವ ಮೋಹನ್ ಭಟ್ - ಸಂಗೀತ
ಪ್ರೊ.ದೇವಿ ಪ್ರಸಾದ್ ದ್ವಿವೇದಿ - ಸಾಹಿತ್ಯ ಮತ್ತು ಶಿಕ್ಷಣ
ಟೆಹೆಮ್ಟೊನ್ ಉದ್ವಾದಿಯಾ - ವೈದ್ಯಕೀಯ
ಸ್ವಾಮಿ ನಿರಂಜನ ನಂದ ಸರಸ್ವತಿ - ಯೋಗ
ಹೆಚ್.ಆರ್.ಹೆಚ್ ಪ್ರಿನ್ಸೆಸ್ ಮಹಾ ಚಕ್ರಿ ಸಿರಿಂದ್ಹೊರ್ನ್(ವಿದೇಶಿ) - ಸಾಹಿತ್ಯ ಮತ್ತು ಶಿಕ್ಷಣ
ದಿ.ಚೊ.ರಾಮಸ್ವಾಮಿ (ಮರಣೋತ್ತರ) - ಸಾಹಿತ್ಯ, ಶಿಕ್ಷಣ ಮತ್ತು ಪತ್ರಿಕೋದ್ಯಮ
ಪದ್ಮ ಪ್ರಶಸ್ತಿ ಪಡೆದ ಕರ್ನಾಟಕದ ಗಣ್ಯರು:
ಪ್ರೊ. ಉಡುಪಿ ರಾಮಚಂದ್ರ ರಾವ್ - ವಿಜ್ಞಾನ
ಶ್ರೀಮತಿ ಭಾರತಿ ವಿಷ್ಣವರ್ಧನ್ - ಕಲೆ-ಸಿನಿಮಾ
ಶ್ರೀಮತಿ ಸುಕ್ರಿ ಬೊಮ್ಮಗೌಡ - ಕಲೆ-ಸಂಗೀತ
ಪ್ರೊ. ಜಿ. ವೆಂಕಟಸುಬ್ಬಯ್ಯ - ಸಾಹಿತ್ಯ-ಶಿಕ್ಷಣ
ಶ್ರೀ. ಗಿರೀಶ್ ಭಾರದ್ವಜ್ - ಸಮಾಜ ಸೇವೆ
ಶ್ರೀ. ಶೇಖರ್ ನಾಯಕ್ - ಕ್ರೀಡೆ-ಕ್ರಿಕೆಟ್
ಶ್ರೀ. ವಿಕಾಸ್ ಗೌಡ - ಕ್ರೀಡೆ-ಡಿಸ್ಕಸ್ ಥ್ರೋ
ಪದ್ಮಶ್ರೀ ಪ್ರಶಸ್ತಿ ಪಡೆದ ಪ್ರಮುಖ:
ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ
ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ
ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್,
ಜಿಮ್ನಾಸ್ಟ್ ದೀಪಾ ಕರ್ಮಕರ್,
ಡಿಸ್ಕಸ್ ಥ್ರೋನಲ್ಲಿ ವಿಕಾಸ್ ಗೌಡ
ಹಾಕಿಯಲ್ಲಿ ಪಿ.ಆರ್. ಸ್ರೀಜೇಶ್
ಪಾರಾಲಂಪಿಕ್ಸ್ ನಲ್ಲಿ ಮರಿಯಪ್ಪನ್ ತಂಗವೇಲು
ಸಂಗೀತದಲ್ಲಿ ಕೈಲಾಶ್ ಖೇರ್