ಪ್ರಧಾನ ಸುದ್ದಿ

ಪುದುಚೆರಿ: ಕಾಂಗ್ರೆಸ್ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಸೋನಿಯಾ ಸಿಮೆಂಟ್

Srinivas Rao BV
ಪುದುಚೆರಿ: ತಮಿಳುನಾಡಿನಲ್ಲಿರುವ ಅಮ್ಮಾ ಸಿಮೆಂಟ್ ಮಾದರಿಯಲ್ಲಿ ಪುದುಚೆರಿಯಲ್ಲೂ  ಸಬ್ಸಿಡಿ ದರದಲ್ಲಿ ಸೋನಿಯಾ ಸಿಮೆಂಟ್ ನ್ನು ನೀಡಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. 
ನೆರೆಯ ರಾಜ್ಯ ತಮಿಳುನಾಡಿನ ಮಾದರಿಯಲ್ಲಿ ಪುದುಚೆರಿಯಲ್ಲಿಯೂ ಸಹ ಸಬ್ಸಿಡಿ ದರದಲ್ಲಿ ಸೋನಿಯಾ ಸಿಮೆಂಟ್ ನ್ನು ನೀಡಲಾಗುತ್ತದೆ. ಈ ಯೋಜನೆಯನ್ನು ಜಾರಿಗೊಳಿಸುವುದರ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಎಂ ಕಂದಸ್ವಾಮಿ ಹೇಳಿದ್ದಾರೆ. 
ಸಿಮೆಂಟ್ ನ ದರ ಹಾಗೂ ಲಭ್ಯತೆಯ ಬಗ್ಗೆ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಕಂದಸ್ವಾಮಿ, ಸಬ್ಸಿಡಿ ದರದಲ್ಲಿ ಸೋನಿಯಾ ಸಿಮೆಂಟ್ ನೀಡುವ ಸರ್ಕಾರದ ಪ್ರಸ್ತಾವನೆಯನ್ನು ತಿಳಿಸಿದ್ದಾರೆ. 
SCROLL FOR NEXT