ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಮೈಸೂರಿಗೆ ಸಿಗದ ಗಿನ್ನಿಸ್ ಯೋಗ

ಜೂನ್ ೨೧ ರ ಅಂತಾರಾಷ್ಟ್ರೀಯ ಯೋಗ ದಿನದಂದು ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಜನ ಯೋಗಾಭ್ಯಾಸ ಮಾಡಿ ಗಿನ್ನಿಸ್ ದಾಖಲೆ ಮಾಡಲು ಸಜ್ಜಾಗಿದ್ದ ಮೈಸೂರಿಗೆ, ಅಹಮದಾಬಾದ್ ನಗರ ಕೂದಲೆಳೆ

ಮೈಸೂರು: ಜೂನ್ ೨೧ ರ ಅಂತಾರಾಷ್ಟ್ರೀಯ ಯೋಗ ದಿನದಂದು ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಜನ ಯೋಗಾಭ್ಯಾಸ ಮಾಡಿ ಗಿನ್ನಿಸ್ ದಾಖಲೆ ಮಾಡಲು ಸಜ್ಜಾಗಿದ್ದ ಮೈಸೂರಿಗೆ, ಅಹಮದಾಬಾದ್ ನಗರ ಕೂದಲೆಳೆ ಅಂತರದಿಂದ ಸೋಲಿಸಿ ಗಿನ್ನಿಸ್ ಗರಿಯನ್ನು ತನ್ನ ಮುಡಿಗೆ ಏರಿಸಿಕೊಂಡಿದೆ. ಅಧಿಕಾರಿಗಳ ಪ್ರಕಾರ ಅಹಮದಾಬಾದ್ ನಲ್ಲಿ ೫೪,೫೨೨ ಜನ ಒಂದೇ ಸ್ಥಳದಲ್ಲಿ ಯೋಗಾಭ್ಯಾಸ ಮಾಡಿದ್ದರೆ, ಮೈಸೂರಿನಲ್ಲಿ ೫೪,೧೦೧ ಜನ ನೆರೆದಿದ್ದರು ಎಂದು ತಿಳಿದುಬಂದಿದೆ. 
ಮೈಸೂರು ಜಿಲ್ಲಾಧಿಕಾರಿ ರಣದೀಪ್ ತಿಳಿಸಿರುವಂತೆ "ನಾವಿನ್ನು ಗಿನ್ನಿಸ್ ತಂಡಕ್ಕೆ ದಾಖಲೆಗಳನ್ನು ನೀಡಬೇಕಿದೆ. ೫೪,೧೦೧ ಜನಕ್ಕೆ ಟಿಕೆಟ್ ಗಳನ್ನು ನೀಡಲಾಗಿತ್ತು. ಆದರೆ ಅಂದು ಮೈದಾನದಲ್ಲಿ ಇವರನ್ನು ಹೊರತು ಪಡಿಸಿ ಹಲವು ಯೋಗಾಭ್ಯಾಸಿಗಳು, ಸ್ವಯಂಸೇವಕರು ಯೋಗ ಮಾಡಿದ್ದಾರೆ. ಅವರಿಗೆ ಟಿಕೆಟ್ ಗಳನ್ನು ನೀಡಿರಲಿಲ್ಲ. ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿರುವಂತೆ ವಿವರಗಳನ್ನು ಕಲೆ ಹಾಕಲು ಹೆಚ್ಚುವರಿ ನಾಲ್ಕು ದಿನಗಳು ಬೇಕಾಗಿದೆ. ಈ ಘೋಷಣೆ ಮಾಡುವುದಕ್ಕಿಂತಲೂ ಮೊದಲು ಗಿನ್ನಿಸ್ ತಂಡ ಇನ್ನಷ್ಟು ದಿನ ಕಾಯಬೇಕಿತ್ತು" ಎಂದಿದ್ದಾರೆ. 
"ಮುಂದಿನ ವಾರ ನಮ್ಮ ಸಮಾಲೋಚಕರು ಅಂತಿಮ ದಾಖಲೆಗಳನ್ನು ಸಲ್ಲಿಸಲಿದ್ದಾರೆ. ಅವರು ಮರುಪರಿಶೀಲನೆ ಮಾಡುವ ಭರವಸೆ ಇದೆ. ಸದ್ಯಕ್ಕೆ ೪೨೧ ಅಭ್ಯರ್ಥಿಗಳ ವ್ಯತ್ಯಾಸ ಇದೆ" ಎಂದು ಕೂಡ ಅವರು ಹೇಳಿದ್ದಾರೆ. 
ಅರಮನೆ ಆವರಣದಲ್ಲಿ ಜೂನ್ ೧೯ ರಂದು ಯೋಗ ಅರಿವಿಗಾಗಿ ೮,೩೮೧ ವಿದ್ಯಾರ್ಥಿಗಳು ನಡೆಸಿದ ಮಾನವ ಸರಪಳಿ ಗಿನ್ನಿಸ್ ದಾಖಲೆ ಸೇರುವ ಭರವಸೆ ವ್ಯಕ್ತಪಡಿಸಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

"ಕೇಸರಿ ಧರಿಸುವ ಯೋಗ ಗುರು ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ": ಬಾಬಾ ರಾಮ್‌ದೇವ್ ವಿರುದ್ಧ ಕಂಗನಾ ಮತ್ತೆ ಕಿಡಿ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ