ಗಾಂಧಿನಗರ: ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ವಿಶ್ವ ಹಿಂದೂ ಪರಿಷದ್ ನ ಮುಖಂಡ ಅತುಲ್ ವೈದ್ಯನಿಗೆ ಗುಜರಾತ್ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.
ಇದಕ್ಕೂ ಮುಂಚಿತವಾಗಿ ವಿಶೇಷ ನ್ಯಾಯಾಲಯ ೬೯ ಜನರನ್ನು ಹತ್ಯೆಗೈದಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೧೧ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ, ೧೨ ಜನಕ್ಕೆ ಏಳು ವರ್ಷಗಳ ಜೈಲು ಸಜೆ ಮತ್ತು ಒಬ್ಬನಿಗೆ ೧೦ ವರ್ಷ ಜೈಲು ಶಿಕ್ಷೆ ನೀಡಿ ತೀರ್ಪು ನೀಡಿತ್ತು.
೧೪ ವರ್ಷ ಹಳೆಯ ಈ ಪ್ರಕರಣದಲ್ಲಿ ವಿಶೇಷ ತನಿಖಾ ನ್ಯಾಯಾಲಯ ೨೪ ಜನರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿ ಶಿಕ್ಷೆ ನೀಡಿತ್ತು. ಈ ಪ್ರಕರಣದ ವಿಚಾರಣೆ ೨೦೦೯ರಲ್ಲಿ ಪ್ರಾರಂಭವಾಗಿತ್ತು.
ಈ ತೀರ್ಪಿನ ವಿರುದ್ಧ ಮಾಜಿ ಕಾಂಗ್ರೆಸ್ ಸಂಸದ ಎಷಾನ್ ಜಾಫ್ರಿ ಅವರ ಪತ್ನಿ ಜಾಕಿಯ ಜಾಫ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಕೌನ್ಸಲ್ಲರ್ ಬಿಪಿನ್ ಪಟೇಲ್ ಒಳಗೊಂಡಂತೆ ೩೬ ಜನರನ್ನು ಆರೋಪಮುಕ್ತಗೊಳಿಸಿದ್ದ ನ್ಯಾಯಾಧೀಶ ಪಿಬಿ ದೇಸಾಯಿ, ಈ ಪ್ರಕರಣ ಪೂರ್ವನಿಯೋಜಿತವಾಗಿರಲಿಲ್ಲ ಎಂದಿದ್ದರು.
ಗುಜರಾತಿನ ಕೋಮು ಗಲಭೆಯಲ್ಲಿ ಫೆಬ್ರವರಿ ೨೮,೨೦೦೨ ರಂದು ನಡೆದ ಈ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಸಂಸದ ಎಷಾನ್ ಜಾಫ್ರಿ ಅವರನ್ನು ಒಳಗೊಂಡಂತೆ ೬೯ ಜನರನ್ನು ಹತ್ಯೆಗೈಯ್ಯಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos