ಪ್ರಧಾನ ಸುದ್ದಿ

ಸಿಕ್ಕಿಂನಲ್ಲಿ ಚೀನಾ ಪಡೆಗಳಿಂದ ಭಾರತೀಯ ಬಂಕರ್ ಗಳ ನೆಲಸಮ!

Lingaraj Badiger
ನವದೆಹಲಿ: ಸಿಕ್ಕಿಂನ ಭಾರತದ ಟ್ರೈ-ಜಂಕ್ಷನ್ ನಲ್ಲಿದ್ದ ಭಾರತೀಯ ಸೇನೆಯ ಹಳೆ ಬಂಕರ್ ಗಳನ್ನು ಚೀನಾ ಮತ್ತು ಭೂತಾನ್ ಬುಲ್ಡೋಜರ್ ಬಳಸಿ ತೆರವುಗೊಳಿಸಲಾಗಿದೆ ಎಂದು ಬುಧವಾರ ಅಧಿಕೃತ ಮೂಲಗಳು ತಿಳಿಸಿವೆ.
ಸಿಕ್ಕಿಂನಲ್ಲಿದ್ದ ಬಂಕರ್ ಗಳು ನೆಲಸಮಗೊಳಿಸುವಂತೆ ಚೀನಾ ಅಧಿಕಾರಿಗಳು ಮಾಡಿದ್ದ ಮನವಿಯನ್ನು ಭಾರತ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಚೀನಾ ಬುಲ್ಡೋಜರ್ ಗಳಂತ ದೊಡ್ಡ ಮಷಿನ್ ಗಳನ್ನು ಬಳಸಿ ಬಲವಂತವಾಗಿ ತೆರವುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಜೂನ್ ಮೊದಲ ವಾರದಲ್ಲಿ ಸಿಕ್ಕಿಂ ವಲಯ ಪ್ರವೇಶಿಸಿದ ಚೀನಾ ಪಡೆಗಳು ಇಂಡೋ ಚೀನಾ ಗಡಿಭಾಗದ ದೋಕಾ ಲಾ ಸಾರ್ವತ್ರಿಕ ಪ್ರದೇಶದಲ್ಲಿದ್ದ ಎರಡು ಬಂಕರ್'ಗಳನ್ನು ನಾಶ ಮಾಡಿದೆ. 
ಎರಡೂ ಸೇನೆಗಳ ಹಿರಿಯ ಅಧಿಕಾರಿಗಳ ನಡುವೆ ಜೂನ್.20ರಂದು ಧ್ವಜಸ್ತಂಭ ಮಾತುಕತೆ ನಡೆದಿದ್ದು, ಆದಾಗ್ಯು ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. 2008ರ ನವೆಂಬರ್'ನಲ್ಲೂ ಕೂಡ ಇದೇ ಪ್ರದೇಶದಲ್ಲಿ ಚೀನಾ ಪಡೆ ಬಂಕರ್'ಗಳನ್ನು ನಾಶಗೊಳಿಸಿತ್ತು.
SCROLL FOR NEXT