ಅಮರನಾಥ ಗುಹಾಂತರ ದೇವಾಲಯ 
ಪ್ರಧಾನ ಸುದ್ದಿ

ಅಮರನಾಥ ಯಾತ್ರೆಗೆ ಜಮ್ಮುವಿನಿಂದ ಹೊರಟ ೪,೪೭೭ ಯಾತ್ರಾರ್ಥಿಗಳು

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ವಾಹನ ಚಾಲನೆ ಪ್ರಾರಂಭವಾದ ಬಳಿಕ, ಚಳಿಗಾಲದ ರಾಜಧಾನಿ ಜಮ್ಮುವಿನಿಂದ ೪೪೭೭ ಯಾತ್ರಾರ್ಥಿಗಳ ಹೊಸ ತಂಡ ಶನಿವಾರ ಅಮರನಾಥ ಯಾತ್ರೆಗೆ

ಜಮ್ಮು: ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ವಾಹನ ಚಾಲನೆ ಪ್ರಾರಂಭವಾದ ಬಳಿಕ, ಚಳಿಗಾಲದ ರಾಜಧಾನಿ ಜಮ್ಮುವಿನಿಂದ ೪೪೭೭ ಯಾತ್ರಾರ್ಥಿಗಳ ಹೊಸ ತಂಡ ಶನಿವಾರ ಅಮರನಾಥ ಯಾತ್ರೆಗೆ ಹೊರಟಿದೆ. 
"೩೨೯೮ ಪುರುಷರು, ೯೮೬ ಮಹಿಳೆಯರು ಮತ್ತು ೧೯೩ ಸಾಧುಗಳನ್ನು ಒಳಗೊಂಡಿರುವ ಯಾತ್ರಿಗಳ ತಂಡ ೧೩೬ ವಾಹನಗಳಲ್ಲಿ ಭಗವತಿ ನಗರ್ ಯಾತ್ರಿ ನಿವಾಸ್ ನಿಂದ ಹೊರಟಿತು ಮತ್ತು ಇವುಗಳಿಗೆ ಭದ್ರತಾ ಪಡೆಗಳು ರಕ್ಷಣೆ ಒದಗಿಸಿದ್ದವು" ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಯಾತ್ರಾರ್ಥಿಗಳನ್ನು ಹೊತ್ತ ವಾಹನಗಳು ಬೆಳಗ್ಗೆ ೪:೧೫ ಕ್ಕೆ ಯಾತ್ರಿ ನಿವಾಸ್ ನಿಂದ ಹೊರಟಿವೆ. ಸಂಜೆ ೩:೩೦ ರ ನಂತರ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಜವಾಹರ್ ಸುರಂಗ ಮಾರ್ಗವನ್ನು ಭದ್ರತಾ ಕಾರಣಗಳಿಂದ ಬಂದ್ ಮಾಡಲಾಗುತ್ತದೆ. 
ನೆನ್ನೆ ರಾಂಬಾನ್ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ಹೈವೇ ಮುಚ್ಚಲಾಗಿತ್ತಾದ್ದರಿಂದ ಯಾವುದೇ ಯಾತ್ರಾರ್ಥಿಗೆ ಕಣಿವೆಯಲ್ಲಿ ಅಡ್ಡಾಡಲು ಅವಕಾಶ ನೀಡಿರಲಿಲ್ಲ. 
ಜೂನ್ ೨೯ ರಂದು ಪ್ರಾರಂಭವಾಗಿರುವ ಈ ೪೦ ದಿನಗಳ ಯಾತ್ರೆ ಶ್ರಾವಣ  ಪೂರ್ಣಿಮೆ ದಿನವಾದ ಆಗಸ್ಟ್ ೭ಕ್ಕೆ ಅಂತ್ಯಗೊಳ್ಳಲಿದೆ. 
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭೂಮಟ್ಟಕಿಂತ ೧೪,೦೦೦ ಅಡಿ ಎತ್ತರದಲ್ಲಿರುವ ಹಿಮಾಲಯದ ಗುಹಾಂತರ ದೇವಾಲಯದ ಹಿಮಲಿಂಗ ದರ್ಶನವನ್ನು ಈಗಾಗಲೇ ೧೦,೦೦೦ಕ್ಕೂ ಹೆಚ್ಚು ಯಾತ್ರಾರ್ಥಿಗಳು ಪಡೆದಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Asia Cup 20225: Operation Sindoor ಬಳಿಕ ಪಾಕಿಸ್ತಾನಕ್ಕೆ ಮತ್ತೆ ಸೋಲಿನ ರುಚಿ ತೋರಿಸಿದ ಭಾರತ!

ಭಾರತಕ್ಕೆ ಕಷ್ಟದ ದಿನಗಳು ಶುರು: 1.4 ಬಿಲಿಯನ್ ಜನರಿದ್ದರೂ ನಮ್ಮಿಂದ ಜೋಳ ಖರೀದಿಸಲ್ಲ; ಮತ್ತೆ ಕೆಂಡಕಾರಿದ ಅಮೆರಿಕ ಸಚಿವ ಲುಟ್ನಿಕ್!

2025 ಮಹಿಳಾ ಹಾಕಿ ಏಷ್ಯಾ ಕಪ್‌: ಚೀನಾ ವಿರುದ್ಧ ಸೋತ ಭಾರತ ಬೆಳ್ಳಿಗೆ ತೃಪ್ತಿ; ಪ್ರಧಾನಿ ಮೋದಿ ಅಭಿನಂದನೆ!

ಹಣಕ್ಕಾಗಿ ರಾಷ್ಟ್ರೀಯತೆ ಬಲಿ: ಭಾರತ-ಪಾಕಿಸ್ತಾನ ಏಷ್ಯಾ ಕಪ್ ಪಂದ್ಯಕ್ಕೆ BJP ವಿರುದ್ಧ ವಿರೋಧ ಪಕ್ಷಗಳ ಆಕ್ರೋಶ!

ಉತ್ತರ ಪ್ರದೇಶ: ಲಾಠಿ ಚಾರ್ಜ್ ನಲ್ಲಿ ಬಿಜೆಪಿ ಕಾರ್ಯಕರ್ತನ ಸಾವು; ತನಿಖೆಗೆ ಎಸ್‌ಐಟಿ

SCROLL FOR NEXT