ಪ್ರಧಾನ ಸುದ್ದಿ

ವಿವಿಗಳು ಚರ್ಚೆಯ ಸ್ಥಳವಾಗಲಿ, ಹಿಂಸೆಗಲ್ಲ: ಪ್ರಣಬ್ ಮುಖರ್ಜಿ

Lingaraj Badiger
ಕೊಚ್ಚಿ: ವಿಶ್ವವಿದ್ಯಾಲಯಗಳು ಚರ್ಚೆಯ ಸ್ಥಳವಾಗಲಿ. ಅಲ್ಲಿ ಹಿಂಸಾಚಾರಕ್ಕೆ ಅವಕಾಶ ನೀಡಬೇಡಿ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಹೇಳಿದ್ದಾರೆ.
ಕೆ.ಎಸ್ ರಾಜಮೋನಿ ಸ್ಮಾರಕ ಉಪನ್ಯಾಶ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಣಬ್ ಮುಖರ್ಜಿ ಅವರು, ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ಮುಕ್ತ ವಿಚಾರ ವಿನಿಮಯಕ್ಕೆ ಅವಕಾಶವಿರಲಿ. ವಿದ್ಯಾರ್ಥಿಗಳು ಮತ್ತು ಉಪನ್ಯಾಶಕರು ಸಂಸ್ಕೃತಿಯ ಹೆಸರಿನಲ್ಲಿ ಅಶಾಂತಿಗೆ ಪ್ರೋತ್ಸಾಹ ನೀಡುವ ಬದಲು ಉತ್ತಮ ಚರ್ಚೆಯಲ್ಲಿ ತೊಡಗಿ ಎಂದು ಕರೆ ನೀಡಿದ್ದಾರೆ.
ಈ ಹಿಂದೆ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ದೇಶದಲ್ಲಿ ಜ್ಞಾನ ಸಮಾಜವನ್ನು ಸೃಷ್ಟಿಸಿದ್ದವು. ಆದರೆ ಈಗ ವಿವಿಗಳ ವಿದ್ಯಾರ್ಥಿಗಳು ಪರಸ್ಪರ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿರುವುದು ವಿಷಾದಕರ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಇತ್ತೀಚಿಗೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಇತ್ತೀಚಿಗೆ ಆರ್ಎಸ್ಎಸ್ ಬೆಂಬಲಿತ ಎಬಿವಿಪಿ ಹಾಗೂ ಎಡರಂಗ ಬೆಂಬಲಿತ ಎಐಎಸ್ ಎ ಬೆಂಬಲಗರ ನಡುವೆ ತೀವ್ರ ಘರ್ಷಣೆ ನಡೆದಿತ್ತು. ಇದು ರಾಷ್ಟ್ರೀಯವಾದಕ್ಕೆ ಸಂಬಂಧಿಸಿದಂತೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.
SCROLL FOR NEXT