ಮಕ್ಕಳ ಕಳ್ಳ ಸಾಗಾಣೆ ಪ್ರಕರಣದಲ್ಲಿ ಬಂಧಗೊಂಡಿದ್ದ ಬಿಜೆಪಿ ನಾಯಕಿ ಜೂಹಿ ಚೌಧರಿ
ಜಲಪೈಗುರಿ: ದಾರ್ಜಿಲಿಂಗ್ ನಲ್ಲಿ ಮಕ್ಕಳ ರಕ್ಷಣಾ ಏಜೆನ್ಸಿಯ ಅಧ್ಯಕ್ಷೆ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿಯ ಸದಸ್ಯೆಯನ್ನು, ಹಸುಗೂಸುಗಳು ಮತ್ತು ಸಣ್ಣ ಮಕ್ಕಳನ್ನು ವಿದೇಶಿಯರಿಗೆ ಮಾರುವ ಆರೋಪದಲ್ಲಿ ಸಿಐಡಿ ಬಂಧಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ದಾರ್ಜಿಲಿಂಗ್ ಜಿಲ್ಲೆಯ ಮಕ್ಕಳ ರಕ್ಷಣಾ ಅಧಿಕಾರಿ ಮೃಣಾಲ್ ಘೋಷ್ ಮತ್ತು ಜಿಲ್ಲಾ ಮಕ್ಕಳ ಅಭಿವೃದ್ಧಿ ಸಮಿತಿಯ ಸದಸ್ಯೆ ದೇಬಶಿಶ್ ಚಂದ್ರ ಅವರನ್ನು ಮೊದಲು ನೆನ್ನೆ ಸಿಲಿಗುರಿ ಜಿಲ್ಲೆಯ ಪಿಂಟೈಲ್ ಗ್ರಾಮದಲ್ಲಿ ಪ್ರಶ್ನೆಗೆ ಒಳಪಡಿಸಿ ನಂತರ ಬಂಧಿಸಲಾಗಿದೆ.
ಜಲಪೈಗುರಿ ಪಟ್ಟಣದಲ್ಲಿ ಮಕ್ಕಳ ರಕ್ಷಣಾ ತಾಣ 'ಬಿಮಲ ಶಿಶು ಗ್ರಿಹೋ'ದಿಂದ ಅನಧಿಕೃತ ದತ್ತು ನೀಡುವ ಹಗರಣದ ಬಗ್ಗೆ ತನಿಖೆ ತೀವ್ರಗೊಂಡಿದ್ದು ಈ ಬಂಧನಗಳನ್ನು ಮಾಡಲಾಗಿದೆ.
ಈ ಹಿಂದೆ ಇದೆ ಪ್ರಕರಣದಲ್ಲಿ ಬಿಜೆಪಿ ಮಹಿಳಾ ಘಟಕಿಯ ನಾಯಕಿ ಜೂಹಿ ಚೌಧರಿ ಮತ್ತು ಇತರ ಮೂವರನ್ನು ಬಂಧಿಸಲಾಗಿತ್ತು. ಅಲ್ಲಿನ ದತ್ತು ಅಧಿಕಾರಿ ಸೋನಾಲಿ ಮೊಂಡಲ್, ನಿರ್ದೇಶಕಿ ಚಂದನ ಚಕ್ರವರ್ತಿ ಮತ್ತು ಅವರ ಸಹೋದರ ಮಾನಸ್ ಭೌಮಿಕ್ ಕೂಡ ಬಂಧನಗೊಂಡಿದ್ದರು.
ಒಂದರಿಂದ ೧೪ ವರ್ಷದ ಮಕ್ಕಳನ್ನು 'ದತ್ತು ನೀಡುವ ಹಗರಣದಲ್ಲಿ' ವಿದೇಶಿಯರಿಗೆ ಮಕ್ಕಳನ್ನು ಅನಧಿಕೃತವಾಗಿ ಮಾರಿರುವ ಆರೋಪವನ್ನು ಇವರ ವಿರುದ್ಧ ಹೊರಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos