ಪ್ರಧಾನ ಸುದ್ದಿ

ಬೆಳೆಯುತ್ತಿರುವ ಅಮೆರಿಕಕ್ಕೆ ಭಾರತದ ಸಹಭಾಗಿತ್ವ ಅಗತ್ಯ: ಜೈಶಂಕರ್

Srinivasamurthy VN

ವಾಷಿಂಗ್ಟನ್: ವಿದೇಶಿ ಹೊರಗುತ್ತಿಗೆ ಮೇಲೆ ನಿಯಂತ್ರಣ ಹೇರ ಬಯಸಿರುವ ಅಮೆರಿಕ ಸರ್ಕಾರಕ್ಕೆ ಪರೋಕ್ಷ ಎಟ್ಟರಿಕೆ ನೀಡಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಅವರು, ಬೆಳೆಯುತ್ತಿರುವ ಅಮೆರಿಕಕ್ಕೆ  ಭಾರತದ ಸಹಭಾಗಿತ್ವ ಅಗತ್ಯ ಎಂದು ಹೇಳಿದ್ದಾರೆ.

ಪ್ರಸ್ತುತ ಅಮೆರಿಕ ಪ್ರವಾದಸದಲ್ಲಿರುವ ಜೈ ಶಂಕರ್ ಅವರು ಇಂದು ಅಮೆರಿಕ ಕಾರ್ಯದರ್ಶಿ ರೆಕ್ಸ್ ಡಬಲ್ಯೂ ಟಿಲ್ಲರ್ಸನ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಈ ವೇಳೆ ಭಾರತ-ಅಮೆರಿಕ ದ್ವಿಪಕ್ಷೀಯ ಒಪ್ಪಂದ, ವಾಣಿಜ್ಯ ಒಪ್ಪಂದ  ಹಾಗೂ ಭಯೋತ್ಪಾದನೆ ವಿಚಾರ ಸೇರಿದಂತೆ ಏಷ್ಯಾ ಫೆಸಿಫಿಕ್, ಅಫ್ಘಾನಿಸ್ತಾನ ವಿಚಾರಗಳನ್ನು ಉಭಯ  ನಾಯಕರು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ಇಂದಿನ ಸಭೆಯಲ್ಲಿ ಎಚ್ 1 ಬಿ ವೀಸಾ ಮೇಲಿನ  ಅಮೆರಿಕ ಸರ್ಕಾರದ ನಿಯಂತ್ರಣವನ್ನು ಪರೋಕ್ಷವಾಗಿ ಟೀಕಿಸಿದ ಜೈಶಂಕರ್ ಅವರು, ಅಮೆರಿಕ ಬೆಳವಣಿಗೆಯಲ್ಲಿ ಭಾರತದ ಸಹಭಾಗಿತ್ವ ಅತ್ಯಗತ್ಯ ಎಂದು ಅಮೆರಿಕ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ  ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದೇ ವೇಳೆ ಹಲವು ಅಮೆರಿಕ ಅಧಿಕಾರಿಗಳನ್ನು ಭೇಟಿ ಮಾಡಿದ ಜೈ ಶಂಕರ್ ಅವರು, ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ ಮತ್ತು ಅಫ್ಘಾನಿಸ್ತಾನ ವಿಚಾರ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಚರ್ಚಿಸಿದ್ದಾರೆ ಎಂದು  ತಿಳಿದುಬಂದಿದೆ. ಜೈಶಂಕರ್ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರೋಸಸ್, ಭದ್ರತಾ ಕಾರ್ಯದರ್ಶಿ ಜಾನ್ ಎಫ್ ಕೆಲ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಲೆ.ಜ. ಹೆಚ್ ಆರ್ ಮೆಕ್ ಮಾಸ್ಟರ್, ಹೌಸ್ ಸ್ಪೀಕರ್ ಪಾಲ್  ರ್ಯಾನ್ ಸೇರಿದಂತೆ ಹಲವು ಕಾಂಗ್ರೆಸ್ ಸದಸ್ಯರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

SCROLL FOR NEXT