ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ನವದೆಹಲಿ: ರಾಜ್ಯಸಭಾ ಸದಸ್ಯ ಮತ್ತು ಎಸ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಭಾಷ್ ಚಂದ್ರ ಸಲ್ಲಸಿರುವ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ಆಲಿಸಿದ ಕೋರ್ಟ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆವರಿಗೆ ಸೋಮವಾರ ಸಮನ್ಸ್ ನೀಡಿದೆ.
ಕೋರ್ಟ್ ಮುಂದೆ ಜುಲೈ ೨೯ ರೊಳಗೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಮೆಟ್ರೋಪಾಲಿಟನ್ ಮೆಜೆಸ್ಟ್ರೇಟ್ ಸ್ನಿಗ್ಧ ಸರ್ವರಿಯ ಸೂಚಿಸಿದ್ದಾರೆ.
ನೋಟು ಹಿಂಪಡೆತ ಸಮಯದಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಕೇಜ್ರಿವಾಲ್ ವಿರುದ್ಧ ಚಂದ್ರ ಮಾನನಷ್ಟ ಮೊಕದ್ದಮೆ ಸಲ್ಲಿಸಿದ್ದಾರೆ.
ಕಪ್ಪು ಹಣ ಸಂಗ್ರಹಿಸಿರುವ ಪಟ್ಟಿಯಲ್ಲಿ ಚಂದ್ರ ಹೆಸರನ್ನು ಸೇರಿಸಿ ಆಮ್ ಆದ್ಮಿ ಪಕ್ಷದ ಮುಖಂಡ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದರು.
"ನವೆಂಬರ್ ೧೧ ರ ಪತ್ರಿಕಾ ಗೋಷ್ಠಿಯಲ್ಲಿ ಕೇಜ್ರಿವಾಲ್ ನನ್ನ ವಿರುದ್ಧ ಸುಳ್ಳು, ತಿರುಚಿದ ಮತ್ತು ಮಾನನಷ್ಟ ಆರೋಪಗಳನ್ನು ಮಾಡಿದ್ದಾರೆ"ಎಂದು ಚಂದ್ರ ಅರ್ಜಿಯಲ್ಲಿ ದೂರಿದ್ದಾರೆ.
ಐಪಿಸಿ ಸೆಕ್ಷನ್ ೫೦೦ರಡಿ ಕೇಜ್ರಿವಾಲ್ ಅವರಿಗೆ ಶಿಕ್ಷೆ ನೀಡಬೇಕೆಂದು ಚಂದ್ರ ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ.