ನವದೆಹಲಿ: ಸಿ ವೋಟರ್ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಪಂಜಾಬ್ ಮತದಾರ ಈ ಬಾರಿ ದೊಡ್ಡ ಬದಲಾವಣೆ ಬಯಸಿದ್ದು, ಆಮ್ ಆದ್ಮಿ ಪಕ್ಷ(ಎಎಪಿ)ದ ಕೈ ಹಿಡಿದಿದ್ದಾನೆ. ಇದರೊಂದಿಗೆ ಬಿಜೆಪಿ-ಅಕಾಲಿದಳ ಮೈತ್ರಿಕೂಟಕ್ಕೆ ಮುಖಭಂಗವಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಸಿ ವೋಟರ್, ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ, ಪಂಜಾಬ್ ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಅಕಾಲಿದಳ ಮೈತ್ರಿ ಕೂಟ 5ರಿಂದ 13 ಸ್ಥಾನ, ಕಾಂಗ್ರೆಸ್ 41ರಿಂದ 49, ಎಎಪಿ 59 ರಿಂದ 67 ಸ್ಥಾನ ಪಡೆದರೆ ಇತರರು ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.
ಇನ್ನು ಸಿಎಸ್‌ಡಿಎಸ್, ಆ್ಯಕ್ಷಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ, ಪಂಜಾಬ್ ನಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲಿದ್ದು, ಬಿಜೆಪಿ 15 ರಿಂದ 20 ಸ್ಥಾನ, ಕಾಂಗ್ರಸ್ 58 ರಿಂದ 65 ಸ್ಥಾನ ಪಡೆದರೆ, ಎಎಪಿ 35 ರಿಂದ 40 ಸ್ಥಾನಗಳನ್ನು ಪಡೆಯಲಿದೆ.
117 ಸದಸ್ಯ ಬಲ ಹೊಂದಿರುವ ಪಂಜಾಬ್ ವಿಧಾನಸಭೆಯಲ್ಲಿ ಬಹುಮತಕ್ಕೆ 59 ಸ್ಥಾನಗಳ ಅಗತ್ಯವಿದೆ.