ಜಮ್ಮು: ಗುಂಡಿನ ಗಾಯಗಳಿಂದ ಮೃತಪಟ್ಟಿರುವ ಭಾರತೀಯ ಯೋಧನ ದೇಹ ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ಗುರುವಾರ ಪತ್ತೆಯಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
ಪೂಂಚ್ ವಿಭಾಗದ, ದರಬಾದಲ್ಲಿ ಸಿಪಾಯಿ ಬಲರಾಜ್ ಸಿಂಗ್ ಮೃತರಾಗಿರುವುದನ್ನು ತನಿಖೆ ಮಾಡಲು ಸೇನೆ ಆದೇಶಿಸಿದೆ.
ಮೃತಪಟ್ಟಿರುವ ಪಂಜಾಬ್ ಮೂಲದ ೨೪ ವರ್ಷದ ಬಲರಾಜ್ ಸಿಂಗ್, ಪತ್ನಿ ಮತ್ತು ಪುತ್ರಿಯನ್ನು ತೊರೆದಿದ್ದಾರೆ.