ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ದಯನೀಯ ಸೋಲಿನ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೆಳಗಿಳಿಯುವ ಪ್ರಶ್ನೆಯೇ ಇಲ್ಲ ಎಂದು ಶನಿವಾರ ಹೇಳಿದ್ದಾರೆ.
"ರಾಹುಲ್ ಗಾಂಧಿ ಕೆಳಗಿಳಿಯುವ ಪ್ರಶ್ನೆಯೇ ಇಲ್ಲ" ಎಂದು ಕಾಂಗ್ರೆಸ್ ನಾಯಕತ್ವ ಬದಲಾಯಿಸುವ ಮಾಧ್ಯಮಗಳ ಪ್ರಶ್ನೆಗೆ ಸಿಂಗ್ ಉತ್ತರಿಸಿದ್ದಾರೆ.
"ಕಾಂಗ್ರೆಸ್ ಪಕ್ಷದ ಒಗ್ಗಟ್ಟಿಗೆ ನೆಹರು-ಗಾಂಧಿ ಕುಟುಂಬ ದೊಡ್ಡ ಶಕ್ತಿ ಮತ್ತು ನಾಯಕತ್ವ ಈಗ ರಾಹುಲ್ ಅವರಿಗೆ ಲಭಿಸಿದೆ" ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶ ಮತ್ತು ಉತ್ತರಾಖಾಂಡ್ ನಲ್ಲಿ ಬಿಜೆಪಿ ಗೆಲುವುನತ್ತ ನಾಗಾಲೋಟದಿಂದ ಮುಂದುವರೆದಿರುವುದರಿಂದ ಸೋಲನ್ನು ಒಪ್ಪಿಕೊಂಡಿರುವ ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಪ್ರಾದೇಶಿಕ ಮುಖಂಡರನ್ನು ಬೆಳೆಸಬೇಕಿದೆ ಎಂದಿದ್ದಾರೆ.
"ನಾನು ಹಿಂದೆಯೂ ಹೇಳಿದ್ದೇನೆ, ನಾವು ರಾಜ್ಯಗಳಲ್ಲಿ ಮುಖಂಡರನ್ನು ಬೆಳೆಸಬೇಕಿದೆ. ಬಲಶಾಲಿ ಪ್ರಾದೇಶಿಕ ನಾಯಕರಿಲ್ಲದ ಕಡೆಗಳಲ್ಲಿ ಪಕ್ಷವನ್ನು ಕಟ್ಟುವ ನಿರ್ಣಾಯಕ ಕ್ರಮಕ್ಕೆ ಮುಂದಾಗಬೇಕಿದೆ" ಎಂದು ಸಿಂಗ್ ಹೇಳಿದ್ದಾರೆ.
ಪಂಜಾಬ್, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವಿನತ್ತ ಮುನ್ನುಗ್ಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics