ಪ್ರಧಾನ ಸುದ್ದಿ

ಪರ್ರಿಕರ್ ಮುಖ್ಯಮಂತ್ರಿ ಸ್ಥಾನಕ್ಕೆ ಹಿಂದಿರುಗಬೇಕೆಂದು ನಿರ್ಣಯ ಮಂಡಿಸಿದ ಶಾಸಕರು

Guruprasad Narayana
ಪಣಜಿ: ಸದರಿ ಕೇಂದ್ರ ಭದ್ರತಾ ಸಚಿವ ಮನೋಹರ್ ಪರ್ರಿಕರ್ ಗೋವಾದ ಮುಖ್ಯಮಂತ್ರಿ ಸ್ಥಾನಕ್ಕೆ ಹಿಂದಿರುಗಬೇಕು ಎಂದು ರಾಜ್ಯದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಬಿಜೆಪಿ ಶಾಸಕರು ಭಾನುವಾರ ನಿರ್ಣಯ ಮಂಡಿಸಿದ್ದಾರೆ. 
ಪರ್ರಿಕರ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಉಸ್ತುವಾರಿ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೆಕರ್ ಭಾಗವಹಿಸಿದ್ದ ಸಭೆಯಲ್ಲಿ ಬಿಜೆಪಿ ಶಾಸಕರು ಈ ನಿರ್ಣಯ ಮಂಡಿಸಿದ್ದಾರೆ.
ಈ ನಿರ್ಣಯವನ್ನು ಮಂಡಿಸಿದಾಗ ಪರ್ರಿಕರ್ ಸ್ವಲ್ಪ ಸಮಯ ಸಭೆಯನ್ನು ತೊರೆದು ಹೋಗಿದ್ದರು ಎಂದು ಬಿಜೆಪಿ ಶಾಸಕ ಮೈಕೆಲ್ ಲೋಬೊ ಹೇಳಿದ್ದಾರೆ. 
"ಗೋವಾ ಮುಖ್ಯಮಂತ್ರಿಯಾಗಿ ಪರ್ರಿಕರ್ ಹಿಂದಿರುಗಬೇಕು ಎಂಬುದು ನಮ್ಮ ನಿರ್ಣಯ. ಮತ್ತು ಇದನ್ನು ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರಿಗೆ ತಿಳಿಸಿದ್ದೇವೆ" ಎಂದು ಲೋಬೊ ಪತ್ರಕರ್ತರಿಗೆ ಹೇಳಿದ್ದಾರೆ. ನವೆಂಬರ್ ೨೦೧೪ ರಲ್ಲಿ ರಕ್ಷಣಾ ಸಚಿವ ಸ್ಥಾನಕ್ಕೆ ನೇಮಕವಾಗುವ ಮೊದಲು ಪರ್ರಿಕರ್ ಗೋವಾ ಮುಖ್ಯಮಂತ್ರಿಯಾಗಿದ್ದರು. 
೪೦ ಸ್ಥಾನದಲ್ಲಿ ೧೩ ಸ್ಥಾನಗಳನ್ನಷ್ಟೇ ಗೆದ್ದು ಸ್ಪಷ್ಟ ಬಹುಮತವಿಲ್ಲದ ಬಿಜೆಪಿ ಈಗ ಸರ್ಕಾರ ರಚಿಸಲು ತಲಾ ಮೂರು ಸ್ಥಾನಗಳನ್ನು ಗೆದ್ದಿರುವ ಗೋವಾ ಫಾರ್ವರ್ಡ್ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷಗಳ ಜೊತೆಗೆ ಮಾತುಕತೆ ನಡೆಸಿರುವುದಾಗಿ ಲೋಬೊ ಹೇಳಿದ್ದಾರೆ. 
ಇವೆರಡು ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡರು ಇನ್ನು ಇಬ್ಬರು ಶಾಸಕರ ಬೆಂಬಲ ಬಿಜೆಪಿ ಪಕ್ಷಕ್ಕೆ ಬೇಕಾಗಿದೆ. ಕಾಂಗ್ರೆಸ್ ೧೭ ಸ್ಥಾನಗಳನ್ನು ಗೆಲ್ಲುವು ಮೂಲಕ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾಗಿ ಹೊರಹೊಮ್ಮಿದೆ. 
"ನಮಗೆ ಅಗತ್ಯ ಸಂಖ್ಯೆಯ ಬೆಂಬಲ ದೊರೆಯುವುದರ ಬಗ್ಗೆ ಖಾತ್ರಿಯಿದೆ ಮತ್ತು ಸೋಮವಾರ ಸರ್ಕಾರ ರಚಿಸಲು ಬೇಡಿಕೆಯಿಡಲಿದ್ದೇವೆ" ಎಂದು ಲೋಬೊ ಹೇಳಿದ್ದಾರೆ. 
SCROLL FOR NEXT