ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

12 ವರ್ಷಕ್ಕೆ ಅಪ್ಪನಾದ ಕೊಚ್ಚಿ ಬಾಲಕ, ದೇಶದ ಅತ್ಯಂತ ಕಿರಿಯ ತಂದೆ

ಬಾಲಕನೊಬ್ಬ 12 ವರ್ಷಕ್ಕೆ ಅಪ್ಪನಾದ ವಿಲಕ್ಷಣ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದ್ದು, ಈತನೆ ದೇಶದ ಅತ್ಯಂತ ಕಿರಿಯ ತಂದೆಯಾಗಿರುವ...

ಕೊಚ್ಚಿ: ಬಾಲಕನೊಬ್ಬ 12 ವರ್ಷಕ್ಕೆ ಅಪ್ಪನಾದ ವಿಲಕ್ಷಣ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದ್ದು, ಈತನೆ ದೇಶದ ಅತ್ಯಂತ ಕಿರಿಯ ತಂದೆಯಾಗಿರುವ ಸಾಧ್ಯತೆ ಇದೆ.
ಕೆಲ ತಿಂಗಳ ಹಿಂದೆ 17 ವರ್ಷದ ಬಾಲಕಿಯೊಬ್ಬಳು ಕಕ್ಕನಾಡ್ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಪ್ರಕರಣದ ತನಿಖೆಯಲ್ಲಿ 12 ವರ್ಷದ ಬಾಲಕ ಆ ಮಗುವಿನ ತಂದೆ ಎಂಬುದು ತಿಳಿದು ಎಲ್ಲರೂ ಆಶ್ಚರ್ಯಕ್ಕೊಳಗಾಗಿದ್ದಾರೆ. 
ಶಿಶುವಿನ ತಂದೆ-ತಾಯಿಯ ಗುರುತನ್ನು ರಹಸ್ಯವಾಗಿ ಇಡಲಾಗಿದೆ. ಮಗು ಹಾಗೂ ಮಗುವಿನ ತಂದೆ ಎನ್ನಲಾದ ಬಾಲಕನ ವಂಶವಾಹಿಗಳನ್ನು ಪರೀಕ್ಷಿಸಲಾಗಿದ್ದು, ವೈದ್ಯಕೀಯ ವರದಿಯಲ್ಲಿ ಮಗು ಹಾಗೂ ಬಾಲಕ ವಂಶವಾಹಿಗಳಿಗೆ ಸಾಮ್ಯತೆ ಇದೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಜಯಕೃಷ್ಣನ್ ಎಸ್ ಅವರು ತಿಳಿಸಿದ್ದಾರೆ.
ಪೊಲೀಸರು ಬಾಲ ದಂಪತಿಗಳ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಬಾಲ ನ್ಯಾಯಮಂಡಳಿ ವಿಚಾರಣೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.
ಇನ್ನು ‘ಬಾಲಕ ವಯಸ್ಸಿಗಿಂತ ಮೊದಲೇ ಪ್ರಬುದ್ಧನಾಗಿದ್ದಾನೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಪ್ರಿಕೋಶಿಯಸ್ ಪ್ಯುಬರ್ಟಿ’ ಎಂದು ಕರೆಯುತ್ತಾರೆ’ ಎಂದು ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಡಾ. ಪಿ.ಕೆ. ಜಬ್ಬಾರ್ ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮಧ್ಯಾಹ್ನ 2.30ಕ್ಕೆ ಸಿದ್ದರಾಮಯ್ಯ ರಾಜೀನಾಮೆ; 3 ಗಂಟೆಗೆ ಪತ್ರಿಕಾಗೋಷ್ಠಿ; ಮುಂದಿನ CM ಡಿ.ಕೆ ಶಿವಕುಮಾರ್

ಮುಂದಿನ CM ಡಿಕೆ.ಶಿವಕುಮಾರ್: ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ, ಅಂದು-ಇಂದು-ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ- ಕಾಂಗ್ರೆಸ್

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಕಣ್ಣೀರು ಹಾಕಿದ ಸಚಿವ ಸಂತೋಷ್ ಲಾಡ್; Video

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ನಿರ್ಗಮನ: ಕರ್ನಾಟಕದಲ್ಲಿ ಕಾಂಗ್ರೆಸ್‌ನ 'ಅಹಿಂದ ಮತಬ್ಯಾಂಕ್' ಮೇಲೆ ಪರಿಣಾಮ?

SCROLL FOR NEXT